ಧಾರವಾಡ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸದ್ಯಕ್ಕೆ ರಿಲೀಫ್ ಸಿಗೋ ಲಕ್ಷಣಗಳು ಕಾಣುತ್ತಿಲ್ಲ. ವಿನಯ ಕುಲಕರ್ಣಿ ಜಾಮೀನು ಕೊರಿ ಧಾರವಾಡ ಹೈಕೋರ್ಟ್‍ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ.
Advertisement
ಕಳೆದ ಎರಡೂವರೆ ತಿಂಗಳಿನಿಂದ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ವಿನಯ್ ಕುಲಕರ್ಣಿ ಹೈಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿದ ಬಳಿಕ, ಸಿಬಿಐಗೆ ತಕರಾರು ಅರ್ಜಿ ಸಲ್ಲಿಸಿತ್ತು. ನಿನ್ನೆ ಧಾರವಾಡ ಹೈಕೋರ್ಟ್ ನಲ್ಲಿ ವಿನಯ್ ಪರ ವಕೀಲರ ಹಾಗೂ ಸಿಬಿಐ ಪರ ವಕೀಲರು ವಾದ ವಿವಾದ ಮಂಡಿಸಿದ್ದರು. ಇವತ್ತು ಮತ್ತೇ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ಜಾಮೀನು ಅರ್ಜಿ ವಜಾಗೊಳಿಸಿದೆ.
Advertisement
Advertisement
ಸದ್ಯ ವಿನಯ್ ಕುಲಕರ್ಣಿ ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆಗಳಿವೆ. ವಿನಯ್ ಕುಲಕರ್ಣಿ ಪರ ಶಶಿಕಿರಣ ಶಟ್ಟಿ ಹಾಗೂ ಬಾಹುಬಲಿ ವಾದ ಮಂಡಿಸಿದ್ದರು. ಸಿಬಿಐ ಪರ ಎಸ್.ವಿ.ರಾಜು ಪ್ರತಿವಾದ ಮಂಡಿಸಿದ್ದರು. ಇನ್ನು ಇವತ್ತು ಸಿಬಿಐ ಅಧಿಕಾರಿಗಳು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಕೆಲ ದಾಖಲೆ ಕೂಡಾ ನೀಡಿದ್ದಾರೆ.