– ನಾಯಿಗಳ ಮೆರವಣಿಗೆ ಮಾಡಿ ಪ್ರತಿಭಟನೆ
ಬೆಂಗಳೂರು: ರಾಜ್ಯ ವಿಧಾನ ಪರಿಷತ್ ಸದಸ್ಯರ ನಡೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಾಟಾಳ್ ನಾಗರಾಜ್, ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ನಾಯಿಗಳ ಮೆರವಣಿಗೆ ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯರಿಗೆ ಮಾನ, ಮರ್ಯಾದೆ ಇದ್ದರೇ ಕೂಡಲೇ ರಾಜೀನಾಮೆ ನೀಡಬೇಕು. ವಿಧಾನಪರಿಷತ್ ನಲ್ಲಿ ರೌಡಿಗಳು ಸದಸ್ಯರಾಗಿದ್ದಾರೆಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ. ಕಾರಣ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಿದ್ದೇ ಅಕ್ರಮವಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಇವರು ಮಾಡಿದ ಅಕ್ರಮ ಇನ್ಯಾವ ರಾಜಕಾರಣಿಯೂ ಮಾಡಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸ್ಪೀಕರ್ ಪೀಠವನ್ನ ದುರುಪಯೋಗ ಮಾಡಿಕೊಂಡು ವಿಧಾನ ಪರಿಷತ್‍ಗೆ ಕೈ ಹಾಕಿದ್ದಾರೆ. ಹಳೆ ಸ್ನೇಹಿತರು ಕುಮಾರಸ್ವಾಮಿ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಧರ್ಮಸಿಂಗ್ ಅಂತಹ ಮುಖ್ಯಮಂತ್ರಿಯನ್ನು ಕೆಳಗಿಳಿಸಿದವರು. ನಾನು ಸುಮಾರು 1967 ರಿಂದ ರಾಜಕಾರಣದಲ್ಲಿದ್ದೇನೆ ಎಂದು ಸದನವನ್ನ ಅನಿರ್ದಿಷ್ಟ ಕಾಲದವರೆಗೆ ಸಭಾಪತಿಗಳು ಪರಿಷತ್‍ನ್ನ ಮುಂದೂಡಿದರು. ಅದರೂ ನೀವು ಯಾವ ಆಧಾರದ ಮೇಲೆ ಪರಿಷತ್ ಕರೆದ್ರಿ. ವಿಧಾನ ಪರಿಷತ್ ದುರುಪಯೋಗ ಮಾಡಿಕೊಂಡಿರುವವರು ರಾಜೀನಾಮೆ ಕೊಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ತಮ್ಮ ತಪ್ಪಿಗೆ ಸಿಎಂ ರಾಜೀನಾಮೆ ಕೊಡಬೇಕು. ನಾಯಿಗಳಿಗಿಂತಲೂ ಕಡೆಯಾಗಿ ನಡೆದುಕೊಂಡಿದ್ದಾರೆ. ಯಾರು ಪರಿಷತ್‍ನಲ್ಲಿ ಸಭೆ ನಡೆಸಿದ್ದಾರೆ ಅವರ ವಿರುದ್ದ ಸಭಾಪತಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.