– ಶಾಲೆ ಆರಂಭ ವಿಚಾರಕ್ಕೆ ಪ್ರತಿಕ್ರಿಯೆ
ಕೊಪ್ಪಳ: ಕಾಂಗ್ರೆಸ್ ಸರ್ಕಾರ ವಿದ್ಯುತ್ತನ್ನು ಸರಿಯಾಗಿ ನಿರ್ವಹಣೆ ಮಾಡಿತ್ತು. ವಿದ್ಯುತ್ ಕ್ಷೇತ್ರದಲ್ಲಿ ರಾಷ್ಟ್ರವೇ ಮೆಚ್ಚುವಂತ ಕೆಲಸ ಮಾಡಿದ್ದೆವು. ಕೇಂದ್ರ ಸರ್ಕಾರ ಸಹ ಮೆಚ್ಚುಗೆ ವ್ಯಕ್ತಪಡಿಸಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
Advertisement
ಕೊಪ್ಪಳದ ಹಿಟ್ನಾಳ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ದರ ಏರಿಕೆಯನ್ನು ಕಡಿಮೆ ಮಾಡಬೇಕು. ಭತ್ತಕ್ಕೆ ಹೆಚ್ಚವರಿಯಾಗಿ 500 ರೂಪಾಯಿ ಬೆಂಬಲ ಬೆಲೆ ಕೊಡಬೇಕು. ಸಿಎಂ ಹಾಗೂ ಮಂತ್ರಿಗಳಿಗೆ ಸರ್ಕಾರ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ರೈತರನ್ನು ಉಳಿಸಿಕೊಳ್ಳುವುದು ಮುಖ್ಯವಲ್ಲ. ಅವರು ಖುರ್ಚಿಗಳು ಭದ್ರವಾಗಿರಬೇಕು. ರೈತರ ಬೆಳೆಯ ಬೆಲೆಯನ್ನು ನಿಯಂತ್ರಣ ಮಾಡಲು ಆಗುತ್ತಿಲ್ಲ. ರೈತರು ಬದುಕಲು ಬಿಡಲ್ಲ. 30 ರಂದು ರಾಜ್ಯದ ಹಿರಿಯ ನಾಯಕರ ಸಭೆ ಕರೆದಿದ್ದೇನೆ. ಅದು ಅನೇಕ ವಿಚಾರಗಳನ್ನು ಚರ್ಚೆ ಮಾಡುತ್ತೇವೆ ಎಂದರು.
Advertisement
Advertisement
ಇದೇ ವೇಳೆ ಶಾಲೆ ಆರಂಭದ ವಿಚಾರಕ್ಕೆ ಪ್ರತಿಕ್ರಿಯಿಸಿ. ಶಿಕ್ಷಣ ಕ್ಷೇತ್ರದ ಕುರಿತು ಸರ್ಕಾರ ನಮ್ಮ ಜೊತೆ ಚರ್ಚೆ ಮಾಡಿಲ್ಲ. ಹಿಂದೆ ಒಂದು ಬಾರಿ ನಮ್ಮನ್ನು ಕೇಳಿದ್ದರು. ಅವರು ತೀರ್ಮಾನ ಮಾಡಲಿ. ಅವರಿಗೆ ಒಂದು ಅವಕಾಶ ಇದೆ ಮಾಡಿಕೊಳ್ಳಲಿ. ಅವರ ತೀರ್ಮಾನ ಆದ ಮೇಲೆ ನಾವು ಮಾತಾಡ್ತೀವಿ ಎಂದು ತಿಳಿಸಿದ ಅವರು ರೋಷನ್ ಬೇಗ್ ಮನೆ ಮೇಲೆ ಸಿಬಿಐ ದಾಳಿ ಕುರಿತು ಪ್ರತಿಕ್ರಿಯೆ ನೀಡಲು ಡಿಕೆಶಿ ನಿರಾಕರಿಸಿದರು.
Advertisement
ಕಾಂಗ್ರೆಸ್ಸಿನ ಮಾಜಿ ಮಂತ್ರಿಗಳು ಬಿಜೆಪಿಗೆ ಸೇರ್ಪಡೆ ವಿಚಾರ ಸಂಬಂಧ ಬಿಜೆಪಿ ಕಡೆಯಿಂದ ಬರುವವರ ಬಗ್ಗೆ ನೀವು ಕೇಳ್ತಿದ್ದೀರಾ ಎಂದು ಪ್ರಶ್ನಿಸಿದ ಡಿಕೆಶಿ, ಅವರು ಈಗ ರೂಲಿಂಗ್ ನಲ್ಲಿದ್ದಾರೆ. ಅವರ ಸಣ್ಣ ಪುಟ್ಟ ಕೆಲಸಗಳನ್ನು ಮುಗಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು.