ಹೈದರಾಬಾದ್: ಹೊಸ ಮನೆ ನಿರ್ಮಾಣಕ್ಕೆ 40 ವರ್ಷಗಳಿಂದ ಬೆಳೆದು ನಿಂತಿರುವ ಮರ ಅಡ್ಡಿಯಾಗುತ್ತಿತ್ತು, ಎಂದು ಬೇವಿನ ಮರ ಕತ್ತರಿಸುತ್ತಿದ್ದ ವ್ಯಕ್ತಿಗೆ 62 ಸಾವಿರ ರೂಪಾಯಿ ದಂಡವನ್ನು ವಿಧಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಜಿ ಸಂತೋಷ್ ರೆಡ್ಡಿ ಅರಣ್ಯ ಇಲಾಖೆಗೆ ಯಾವುದೇ ಮಾಹಿತಿಯನ್ನು ನೀಡದೆ ಮರಕತ್ತರಿಸಿದ್ದರು. ಮರ ಕತ್ತರಿಸುವುದನ್ನು ಗಮನಿಸಿದ ವಿದ್ಯಾರ್ಥಿಯೊಬ್ಬ ಅರಣ್ಯ ಇಲಾಖೆಯ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ತಿಳಿಸಿ ಮರ ಕಡಿಯುತ್ತಿದ್ದವರ ವಿರುದ್ಧ ದೂರು ನೀಡಿದ್ದ.
ತಕ್ಷಣ ಜಾಗೃತರಾದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ. ವ್ಯಕ್ತಿ ಮರ ಕಡಿಯಲು ಅನುಮತಿಯನ್ನು ಪಡೆದಿರಲಿಲ್ಲ. ಹೀಗಾಗಿ 62,075 ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಮರ ಕಡಿದವರ ವಿರುದ್ಧ ಕ್ರಮವನ್ನು ಕೈ ಗೊಂಡಿದ್ದಾರೆ.
ಮರ ಕಡಿದ ವಿಷಯವನ್ನು ಸಂಬಂಧ ಪಟ್ಟ ಇಲಾಖೆಗೆ ತಿಳಿಸಿದ ಬಾಲಕನ ಜವಾಬ್ದಾರಿಯುತವಾಗಿ ವರ್ತಿಸಿದ್ದಕ್ಕೆ ಅರಣ್ಯ ಇಲಾಖೆ ಹಾಗೂ ಸುತ್ತಮುತ್ತಲಿನ ಜನರು ಅಭಿನಂದನೆ ಸಲ್ಲಿಸಿದ್ದಾರೆ.