– ಶಿಕ್ಷಕ ಪತಿಯ ಕಾಮುಕ ಕೃತ್ಯಕ್ಕೆ ಪತ್ನಿಯ ಸಾಥ್
ಮಂಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ನಗ್ನ ಚಿತ್ರ ತೆಗೆದು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಶಿಕ್ಷಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಸುಬ್ರಹ್ಮಣ್ಯದ ಪ್ರೌಢಶಾಲಾ ಶಿಕ್ಷಕ ರಾಯಚೂರು ಮೂಲದ ಗುರುರಾಜ್ ಬಂಧಿತ ಕಾಮುಕ ಶಿಕ್ಷಕ. ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ ಕಾಮುಕ ಶಿಕ್ಷಕ ಗುರುರಾಜ್, ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿ ವಿವಸ್ತ್ರಗೊಳಿಸಿ ಮೊಬೈಲ್ ಮೂಲಕ ಫೋಟೋ ತೆಗೆಯುತ್ತಿದ್ದ ಎನ್ನಲಾಗಿದೆ.
Advertisement
Advertisement
ಈತನ ಕೃತ್ಯಕ್ಕೆ ಗುರುರಾಜ್ ನ ಪತ್ನಿ ರಾಜೇಶ್ವರಿ ಸಾಥ್ ನೀಡುತ್ತಿದ್ದು, ಬಳಿಕ ವಿದ್ಯಾರ್ಥಿನಿಗೆ ನಗ್ನ ಫೋಟೋ ತೋರಿಸಿ ಮನೆಯಿಂದ ಹಣ ತರುವಂತೆ ಆರೋಪಿಗಳು ಬೆದರಿಸುತ್ತಿದ್ದರು. ಕಳೆದ 2018ರಿಂದ ಅತ್ಯಾಚಾರ ಮತ್ತು ಬೆದರಿಕೆ ಪ್ರಕರಣ ನಡೆಯುತ್ತಿದ್ದು, ಇದೀಗ ವಿದ್ಯಾರ್ಥಿನಿಯಿಂದ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಆರೋಪಿಗಳಾದ ಶಿಕ್ಷಕ ಗುರುರಾಜ್ ಹಾಗೂ ಆತನ ಪತ್ನಿ ರಾಜೇಶ್ವರಿಯನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.