ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನ ಅನಿರ್ದಿಷ್ಟಾವಧಿಗೆ ಮುಂದೂಡಿ ಆದೇಶ ಮಾಡಲಾಗಿದೆ.
ಇವತ್ತು ಧಾರವಾಡ ಕರ್ನಾಟಕ ವಿವಿಯ ಕುಲಪತಿ ಕಚೇರಿ ಬಳಿ ದಿಢೀರನೇ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ನಮಗೆ ಸದ್ಯಕ್ಕೆ ಪರೀಕ್ಷೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೊಂಕು ಹೆಚ್ಚಳವಾಗುಗತ್ತಿದೆ. ಹಲವು ಹಾಸ್ಟೆಲ್‍ಗಳಲ್ಲಿ ಕೊವಿಡ್ ಪ್ರಕರಣ ಬಂದಿರುವ ಹಿನ್ನೆಲೆ ಪರೀಕ್ಷೆ ಬೇಡ ಎಂದು ಬೇಡಿಕೆ ಇಟ್ಟ ವಿದ್ಯಾರ್ಥಿಗಳು, ಕೊರೊನಾ ಕಡಿಮೆಯಾದ ಮೇಲೆ ಪರೀಕ್ಷೆ ನಡೆಸಿ ಎಂದು ಮನವಿ ಮಾಡಿಕೊಂಡಿದ್ದರು.
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಕರ್ನಾಟಕ ವಿವಿ ಆಡಳಿತ ಮಂಡಳಿ, ಅನಿರ್ಧಿಷ್ಟಾವಧಿಗೆ ಪರೀಕ್ಷೆ ಮುಂದೂಡಿ ಆದೇಶ ಮಾಡಿದೆ. ಕರ್ನಾಟಕ ವಿವಿ ಶಾರ್ಟ ನೋಟಿಸ್ ನೀಡಿ ಪರೀಕ್ಷೆ ನಡೆಸುತ್ತೇವೆ, ತಾವು ಅದಕ್ಕೆ ಸಹಕರಿಸಿ ಎಂದು ಸೂಚನೆ ನೀಡಿದರು.
ಹಾಸ್ಟೆಲ್‍ಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಸ್ಟೆಲ್ ಸ್ಯಾನಿಟೈಸ್ ಮಾಡಿದ ಬಳಿಕವೇ ಒಳಗೆ ಬರುತ್ತೇವೆ. ಪರೀಕ್ಷೆ ನಡೆಸುವ ಒಂದು ವಾರ ಮುಂಚಿತವಾಗಿ ನಮಗೆ ಸೂಚನೆ ನೀಡಬೇಕು. ಹಾಸ್ಟೆಲ್ ಕ್ಲೀನ್ ಮಾಡಿಸಿದರೆ ಹಿಂದಿರುಗುತ್ತೇವೆ. ಸದ್ಯಕ್ಕೆ ಪರೀಕ್ಷೆ ಮುಂದೂಡಿದ್ದಕ್ಕೆ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.