ಗದಗ: ಬಂಗಾರದ ಮೂಗುತಿ ಖರೀದಿಗಾಗಿ ವಿದೇಶಿಗರ ಸೋಗಿನಲ್ಲಿ ಬಂದು ಬರೋಬ್ಬರಿ 18 ಸಾವಿರ ರೂಪಾಯಿ ಎಗರಿಸಿ ಪರಾರಿಯಾದ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಶ್ರೀ ಲಕ್ಷ್ಮೀ ವೇಂಕಟೇಶ್ವರ ಜುವೆಲರ್ಸ್ ಶಾಪ್‍ಗೆ ಬಂದ ಯುವಕ-ಯುವತಿಯರಿಬ್ಬರು ವಿದೇಶಿಗರ ಸ್ಟೈಲ್‍ನಲ್ಲಿ ಇಂಗ್ಲಿಷ್ ಮಾತನಾಡಿದ್ದಾರೆ. ಚಿನ್ನದ ಮೂಗುತಿ ಬೇಕೆಂದು ಹೇಳಿ ಮೂಗುತಿ ಖರೀದಿಸಿ ವಿದೇಶಿ ಕರೆನ್ಸಿ ನೀಡಿದ್ದಾರೆ. ಈ ನೋಟು ನಮ್ಮಲ್ಲಿ ನಡೆಯುವುದಿಲ್ಲ, ಭಾರತೀಯ ನೋಟು ಕೊಡಿ ಎಂದು ಅಂಗಡಿ ಮಾಲೀಕ ಕೇಳಿದ್ದಾರೆ. ನಮ್ಮಲ್ಲಿ ಭಾರತೀಯ ನೋಟು ಇಲ್ಲ, ಅದು ಹೇಗಿರುತ್ತೆ ತೋರಿಸಿ ಎಂದು ಪುಸಲಾಯಿಸಿದ್ದಾರೆ.
Advertisement
Advertisement
ಆಗ ಅಂಗಡಿ ಮಾಲೀಕ, ಮೊದಲು ತನ್ನ ಬಳಿಯಿರುವ 2 ಸಾವಿರದ ನೋಟು ತೋರಿಸಿದ್ದಾರೆ. ನಂತರ ಬೇರೆ ಯಾವ ಯಾವ ನೋಟು ಇದೆ ತೋರಿಸಿ ಎಂದಿದ್ದಾರೆ. ಆಗ 10 ರೂಪಾಯಿನಿಂದ ಹಿಡಿದು 2 ಸಾವಿರ ರೂಪಾಯಿವರೆಗೆ ಇರುವ ಕಂತೆ ಕಂತೆ ನೋಟುಗಳನ್ನು ತೋರಿಸಿದ್ದಾರೆ. ಆಗ ಈ ಕಳ್ಳರು ಆ ನೋಟಿನ ಕಂತೆಯನ್ನು ಹಿಡಿದು, ನಂಬರ್, ಭಾಷೆ, ಚಿತ್ರ ಎಲ್ಲವನ್ನು ನೋಡುವ ರೀತಿ ನಟಿಸಿದ್ದಾರೆ. ಆಗ ಅಲ್ಲಿದ್ದ ಯುವತಿ ಮಾಲೀಕನ ಗಮನ ಬೇರೆ ಕಡೆ ಸೇಳೆದಾಗ ಯುವಕ 18 ಸಾವಿರ ರೂಪಾಯಿ ಹಣವನ್ನು ಜೇಬಿಗೆ ಇಳಿಸಿಕೊಂಡಿದ್ದಾನೆ. ಈ ಎಲ್ಲ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
Advertisement
ನಂತರ ಬ್ಯಾಂಕ್‍ಗೆ ಹೋಗಿ ಕರೆನ್ಸಿ ಬದಲಿಸಿಕೊಂಡು ಬರುವುದಾಗಿ ಹೇಳಿ, ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅರ್ಧಗಂಟೆ ನಂತರ ಬೇರೆಯವರಿಗೆ ಹಣ ನೀಡಬೇಕಾದ ವೇಳೆ ಹಣವನ್ನು ಎಣಿಸಿಕೊಂಡಾಗ ಬರೋಬ್ಬರಿ 18 ಸಾವಿರ ರೂಪಾಯಿ ಇಲ್ಲವಾಗಿದೆ. ಸಿಸಿ ಕ್ಯಾಮೆರಾ ಚೆಕ್ ಮಾಡಿದಾಗ ವಿದೇಶಿಗರ ಅಸಲಿಯತ್ತು ಗೊತ್ತಾಗಿದೆ. ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದೇಶಿ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.