– ಕೇಂದ್ರದ ಆದೇಶ ಪಾಲಿಸಲು ರಾಜ್ಯ ಸರ್ಕಾರ ರೆಡಿ
ಬೆಂಗಳೂರು: ಮೂರು ದೇಶಗಳಿಂದ ಬರುವವರಿಗೆ 7 ದಿನ ಹೋಮ್ ಐಸೋಲೇಶನ್ ಕಡ್ಡಾಯ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.
ಇಂಗ್ಲೆಂಡ್‍ನಲ್ಲಿ ಕೊರೊನಾ ನೂತನ ಪ್ರಬೇಧ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ ಆದೇಶ ಪಾಲಿಸಲು ರಾಜ್ಯ ಸರ್ಕಾರ ರೆಡಿಯಾಗಿದೆ. ಈಗಾಗಲೇ ಆಗಮಿಸುತ್ತಿರುವವರಿಗೆ ಎಲ್ಲಾ ಏರ್‌ಪೋರ್ಟ್‌ಗಳಲ್ಲಿ ಕಡ್ಡಾಯವಾಗಿ ಆರ್‍ಟಿ-ಪಿಸಿಆರ್ ಟೆಸ್ಟ್ ಮಾಡಿಸಬೇಕು. ಆರ್‌ಟಿ–ಪಿಸಿಆರ್ ನಲ್ಲಿ ಪಾಸಿಟಿವ್ ಬಂದವರಿಗೆ ಕಡ್ಡಾಯವಾಗಿ ಕ್ವಾರಂಟೈನ್ ಅಥವಾ ಐಸೋಲೇಷನ್ ಮಾಡಬೇಕು. ನೆಗೆಟಿವ್ ಬಂದವರು 7 ದಿನಗಳ ಕಾಲ ಕಡ್ಡಾಯವಾಗಿ ಐಸೋಲೇಷನ್ ಗೆ ಒಳಗಾಗಬೇಕು ಎಂದು ಸೂಚಿಸಿದರು.
ಇಂಗ್ಲೆಂಡ್, ಡೆನ್ಮಾರ್ಕ್, ನೆದರ್ ಲ್ಯಾಂಡ್ಸ್ ನಲ್ಲಿ ರೂಪಾಂತರಗೊಂಡಿರುವ ಕೊರೊನಾ ವೈರಸ್ ಪತ್ತೆಯಾಗಿದೆ. ಹೊಸ ವಂಶವಾಹಿಯ ವೈರಾಣು ಕಾಣಿಸಿಕೊಂಡಿವೆ. ಈಗ ಇರುವ ವೈರಸ್‍ಗಿಂತಲೂ ಹೊಸ ವೈರಸ್‍ನಿಂದ ಸೋಂಕು ಹರಡುವ ಹರಡುವ ಪ್ರಮಾಣ ಹೆಚ್ಚಿತ್ತದೆ.ಈ ಬಗ್ಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಿದೆ ಎಂದರು.
ಏರ್ ಇಂಡಿಯಾದಿಂದ 246 ಮಂದಿ, ಬ್ರಿಟಿಷ್ ಏರ್ ವೇಸ್ 291 ಬಂದಿದ್ದು, ಏರ್ ಇಂಡಿಯಾದಿಂದ 89 ಜನ ಹಾಗೂ ಬ್ರಿಟಿಷ್ ಏರ್ ವೇಸ್ ನಿಂದ 49 ಜನರು ಟೆಸ್ಟ್ ಮಾಡಿಸದೇ ಬಂದಿದ್ದು, ಒಟ್ಟು 138 ಜನ ಟೆಸ್ಟ್ ಇಲ್ಲದೆ ಬಂದಿದ್ದಾರೆ ಕರ್ನಾಟಕಕ್ಕೆ ಬಂದಿದ್ದಾರೆ. ಈ 138 ಜನರನ್ನ ಟ್ರೇಸ್ ಮಾಡಿ ಟೆಸ್ಟ್ ಮಾಡ್ತೀವಿ. ವಿದೇಶದಿಂದ ಬರೋರಿಗೆ 7 ದಿನ ಹೋಮ್ ಐಸೋಲೇಶನ್ ಕಡ್ಡಾಯ ಮಾಡಲಾಗುತ್ತದೆ. ಅಲ್ಲದೆ ಪಾಸಿಟಿವ್ ಬಂದವರಿಗೆ ಸಾಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದೆ ಎಂದರು.
ಕರ್ನಾಟಕದಲ್ಲಿ ಅನೇಕ ತಿಂಗಳುಗಳ ಬಳಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ಮೂರು ಅಂಕೆಗೆ ಇಳಿದಿದೆ. ಇಂದು 772 ಮಂದಿಗೆ ಪಾಸಿಟಿವ್ ಬಂದಿದೆ. 1,261 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 14001 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.
ವಿಶೇಷ ಏನೆಂದರೆ ಈ ಹಿಂದೆ ಕೊರೊನಾ ಆರಂಭದ ಸಮಯದಲ್ಲಿ ಪ್ರತಿ ದಿನ ಕರ್ನಾಟಕ ಸರ್ಕಾರದ ಮಂತ್ರಿಗಳು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತಿದ್ದರು. ಕೊರೊನಾ ಇಳಿಕೆಯಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವುದು ನಿಂತಿತ್ತು. ಈಗ ಮತ್ತೆ ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಇಂಗ್ಲೆಂಡಿನಲ್ಲಿ ಪತ್ತೆಯಾದ ಹೊಸ ವೈರಸ್ ಹಿಂದಿನ ವೈರಸ್ಸಿಗಿಂತ ಶೇ.70ರಷ್ಟು ಪಟ್ಟು ವೇಗವಾಗಿ ಹರಡುತ್ತಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೊರೊನಾ ಹೊಸ ರೂಪಾಂತರ – ಇಂಗ್ಲೆಂಡಿನಲ್ಲಿ ಲಾಕ್‍ಡೌನ್ ಜಾರಿ