ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಲಸಿಕೆ ಕೊರತೆ ಉಂಟಾಗಿದ್ದು, 24 ಗಂಟೆಗಳಲ್ಲಿ ವಿದೇಶಗಳಿಂದ ಲಸಿಕೆ ತರಿಸಿ ಹಂಚಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ರಾಷ್ಟ್ರಗಳು ಅಗತ್ಯಕ್ಕೂ ಅಧಿಕ ಲಸಿಕೆಯನ್ನು ಸಂಗ್ರಹಿಸಿಟ್ಟುಕೊಂಡಿವೆ. ಅಂತಹ ರಾಷ್ಟ್ರಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿ ಲಸಿಕೆ ತರಿಸಿಕೊಳ್ಳಲಿ ಎಂದು ತಿಳಿಸಿದರು.
Advertisement
Vaccination for the 18+ category halted in Delhi from today. Vaccine stock for this category has been consumed. Due to this, their vaccination centres have been shut. Only a few vaccines are available at some centres which will be administered today: Delhi CM Arvind Kejriwal pic.twitter.com/rC96M5ZvS6
— ANI (@ANI) May 22, 2021
Advertisement
ಲಸಿಕೆ ದಾಸ್ತಾನು ಖಾಲಿಯಾಗುವ ಹಿನ್ನೆಲೆ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ದೆಹಲಿಗೆ 2.5 ಕೋಟಿ ಡೋಸ್ ವ್ಯಾಕ್ಸಿನ್ ಅಗತ್ಯವಿದೆ. ಆದರೆ ಮೇ ತಿಂಗಳಲ್ಲಿ ಕೇವಲ 16 ಲಕ್ಷ ಡೋಸ್ ವ್ಯಾಕ್ಸಿನ್ ಮಾತ್ರ ಲಭಿಸಿದೆ. ಜೂನ್‍ನಲ್ಲಿ ಕೇವಲ 8 ಲಕ್ಷ ಡೋಸ್ ಮಾತ್ರ ಸಿಗಬಹುದು ಎಂದು ಅಂದಾಜಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
Advertisement
ದೆಹಲಿಯ ಒಟ್ಟಾರೆ ಜನಸಂಖ್ಯೆಯನ್ನು ಪರಿಗಣಿಸಿದರೆ, ರಾಷ್ಟ್ರ ರಾಜಧಾನಿಗೆ ಪ್ರತಿ ತಿಂಗಳು 80 ಲಕ್ಷ ಡೋಸ್ ಲಸಿಕೆ ಅಗತ್ಯವಿದೆ. ಕೋವಿಡ್-19 ಲಸಿಕೆಗೆ ಹೆಚ್ಚುತ್ತಿರುವ ಬೇಡಿಕೆ ತಗ್ಗಿಸಲು ಕೇಂದ್ರ ಸರ್ಕಾರ ಕ್ರಮ ಕೂಗೊಳ್ಳಬೇಕು. ಅಲ್ಲದೆ ಕೋವ್ಯಾಕ್ಸಿನ್ ಫಾರ್ಮುಲಾವನ್ನು ಇತರ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲು ಭಾರತ್ ಬಯೋಟೆಕ್ ಕಂಪನಿ ಒಪ್ಪಿಕೊಂಡಿದ್ದು, ಲಸಿಕೆ ತಯಾರಿಸಲು ಕೇಂದ್ರ ಸರ್ಕಾರ ಎಲ್ಲ ಫಾರ್ಮಾ ಕಂಪನಿಗಳಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಕೆಲ ದೇಶಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಲಸಿಕೆಯನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದ್ದು, ಈ ವ್ಯಾಕ್ಸಿನ್‍ನ್ನು ಭಾರತಕ್ಕೆ ಕೊಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿಕೊಳ್ಳಬೇಕು. ಅಲ್ಲದೆ ವಿದೇಶಗಳಲ್ಲಿನ ಲಸಿಕೆಯನ್ನು ಕೇವಲ 24 ಗಂಟೆಗಳಲ್ಲಿ ಕೊಂಡುಕೊಂಡು ದೇಶದಲ್ಲಿನ ಜನರಿಗೆ ವಿತರರಿಸಲಿ. ದೇಶದಲ್ಲಿ ಲಸಿಕೆ ಉತ್ಪಾದನೆಗೆ ವಿದೇಶಿ ಕಂಪನಿಗಳಿಗೂ ಅವಕಾಶ ನೀಡಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.