ಲಕ್ನೋ: ಮಹಿಳಾ ಎಸ್‍ಪಿಯೊಬ್ಬರು ವಿಡಿಯೋ ಕಾಲ್‍ನಲ್ಲಿ ವೈದ್ಯರ ಸಲಹೆ ಪಡೆದು ರೈಲ್ವೆ ಪ್ಲಾಟ್‍ಫಾರ್ಮ್ ಮೇಲೆಯೇ ಮಹಿಳೆಗೆ ಹೆರಿಗೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಗ್ವಾಲಿಯರ್-ಗೋವಾ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಪೂಜಾ ಕುಮಾರಿಗೆ ಝಾನ್ಸಿ ರೈಲ್ವೇ ನಿಲ್ದಾಣಕ್ಕೆ ಆಗಮಿಸುವ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆಕೆಯ ಪತಿ ವೈದರ ನೆರವಿಗಾಗಿ ಫ್ಲಾಟ್ ಫಾರ್ಮ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರ ಸಹಾಯಕೋರಿದ್ದರು.
Advertisement
Advertisement
ರಾತ್ರಿಯ ಸಮಯವಾದ ಕಾರಣ ವೈದ್ಯರ ನೆರವು ಲಭಿಸುವುದು ಕಷ್ಟಸಾಧ್ಯವಾಗಿತ್ತು. ಅಲ್ಲದೇ ಆ ವೇಳೆಗೆ ಮಹಿಳೆಗೆ ಹೆರಿಗೆ ನೋವು ಹೆಚ್ಚಾದ ಕಾರಣದಿಂದ ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸ್ ಎಸ್‍ಪಿ ರಾಜ್ ಕುಮಾರಿ ಗಜ್ಜಾರ್ ನೆರವಿಗೆ ಧವಿಸಿದ್ದರು. ತಮಗೆ ತಿಳಿದಿದ್ದ ವೈದ್ಯರಿಗೆ ವಿಡಿಯೋ ಕಾಲ್ ಮಾಡಿ ಮಾರ್ಗದರ್ಶನ ಪಡೆದು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.
Advertisement
ಹೆರಿಗೆ ಬಳಿಕ ಆಂಬುಲೆನ್ಸ್ ನೆರವಿನಿಂದ ತಾಯಿ-ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಘಟನೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳಾ ಎಸ್‍ಐ ಕಾರ್ಯಕ್ಕೆ ಭಾರೀ ಪ್ರಶಂಸೆ ಲಭಿಸಿದೆ. ಇತ್ತ ದಂಪತಿಗಳು ಕೂಡ ಪೊಲೀಸರ ಸಹಾಯಕ್ಕೆ ಧನ್ಯವಾದ ತಿಳಿಸಿದ್ದಾರೆ.