ಹೈದರಾಬಾದ್: ನಿನ್ನೆ ಟಾಲಿವುಡ್ ನಟ ವಿಜಯ್ ದೇವರಕೊಂಡ ಹುಟ್ಟುಹಬ್ಬದ ಪ್ರಯುಕ್ತ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ವಿಜಯ್ ಜೊತೆಗಿರುವ ಸೆಲ್ಫಿವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿಜಯ್ ದೇವರಕೊಂಡ ಜೊತೆಗಿರುವ ಫೋಟೋವೊಂದನ್ನು ರಶ್ಮಿಕಾ ಮಂದಣ್ಣ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ನನಗೆ ಗೊತ್ತು, ನಾನು ಸೂಪರ್ ಲೇಟ್ ಅಂತ, ಆದರೆ ಹುಟ್ಟು ಹಬ್ಬದ ಶುಭಾಶಯಗಳು ಮಿಸ್ಟರ್ ವಿಜಯ್ ದೇವರಕೊಂಡ ಎಂದು ಬರೆಯುವುದರ ಜೊತೆಗೆ ಫ್ಲವರ್, ಸ್ಮೈಲಿ ಮತ್ತು ಬಿಳಿ ಬಣ್ಣದ ಹಾರ್ಟ್ ಎಮೋಜಿಗಳನ್ನು ಕ್ಯಾಪ್ಷನ್‍ನಲ್ಲಿ ಹಾಕುವ ಮೂಲಕ ವಿಶ್ ಮಾಡಿದ್ದಾರೆ.
ಫೋಟೋದಲ್ಲಿ ವಿಜಯ್ ದೇವರಕೊಂಡ ಬೂದು ಬಣ್ಣದ ಟೀ ಶರ್ಟ್ ಧರಿಸಿದ್ದು, ಗ್ರೇ ಕಲರ್ ಟೋಪಿ ಹಾಕಿಕೊಂಡು ರಶ್ಮಿಕಾ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಅಲ್ಲದೆ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಕೂಡ ಫ್ಯಾಮಿಲಿ ಫೋಟೊವೊಂದನ್ನು ಶೇರ್ ಮಾಡಿಕೊಳ್ಳುವುದರ ಮೂಲಕ ಪ್ರೀತಿಯ ಅಣ್ಣನಿಗೆ ವಿಶ್ ಮಾಡಿದ್ದಾರೆ.
View this post on Instagram
ಸದ್ಯ ಮುಂದಿನ ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಜೋಡಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.
View this post on Instagram
ಇದೀಗ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳುತ್ತಿರುವ ಲೈಗರ್ ಸಿನಿಮಾದಲ್ಲಿ ವಿಜಯ್ ಅಭಿನಯಿಸುತ್ತಿದ್ದು, ವಿಜಯ್‍ಗೆ ಜೋಡಿಯಾಗಿ ಅನನ್ಯ ಪಾಂಡೆ ನಟಿಸಿದ್ದಾರೆ. ಈ ಸಿನಿಮಾ ಏಕಕಾಲದಲ್ಲಿ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರೀಕರಿಸಲಾಗುತ್ತಿದ್ದು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಆಗಲಿದೆ.