ವಿಜಯಪುರ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಆಪ್ತರಾಗಿರುವವರು ಸಿಸಿಬಿಯಲ್ಲಿದ್ದಾರೆ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಲೆಳೆದಿದ್ದಾರೆ,
ಸಿಸಿಬಿಯವರು ಏನ್ ಮಾಡ್ತಿದ್ದಾರೆ? ಸಿಸಿಬಿ ಕೆಲಸವಿರದ ತನಿಖೆಗಳನ್ನೆಲ್ಲ ಮಾಡ್ತಾರೆ. ಡ್ರಗ್ಸ್ ಕೇಸ್, ಯುವರಾಜ್ ಕೇಸ್ ಅರ್ಧಕ್ಕೆ ಬಿಟ್ರು. ಸಿಸಿಬಿಯಲ್ಲಿರೋ ಹಿರಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಿ. ವಿಜಯೇಂದ್ರರಿಗೆ ಆಪ್ತರಿರೋರು ಸಿಸಿಬಿಯಲ್ಲಿದ್ದಾರೆ, ಕಣ್ಣು ತೆರೆದು ನೋಡಲಿ ಎಂದು ಹೇಳಿದ್ದಾರೆ.
Advertisement
Advertisement
ಇದೇ ವೇಳೆ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿ, ಪಾಪ ಅವರು ವೈಯಕ್ತಿಕವಾಗಿ ಏನೋ ಮಾತಾಡಿದ್ದಾರೆ. ಅವರದ್ದೇ ಧ್ವನಿ ಇದೆಯೋ ಇಲ್ವೋ ಅನ್ನೋದು ಗೊತ್ತಿಲ್ಲ. ಅವರೇ ಹೇಳಿದ್ದಾರೆ ಧ್ವನಿ ನನ್ನದು ಅಲ್ಲ ಅಂತ. ಈ ಬಗ್ಗೆ ತನಿಖೆ ಆಗಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಬುದ್ಧರು: ಉಮೇಶ್ ಕತ್ತಿ
Advertisement
ಖಾಸಗಿಯಾಗಿ ಮಾತನಾಡಿದ್ದನ್ನ ರೆಕಾರ್ಡ್ ಮಾಡಿಕೊಳ್ಳೊದು ಅಪರಾಧ. ತಮ್ಮ ಆತ್ಮೀಯರ ಮುಂದೆ ಮಾತನಾಡಿರುತ್ತಾರೆ. ವ್ಯಕ್ತಿಗತ ಗೌಪ್ಯತೆಗೆ ರಾಜ್ಯದಲ್ಲಿ ಭದ್ರತೆ ಎಲ್ಲಿದೆ? ರಾಜ್ಯದಲ್ಲಿ ಏನು ಬೇಕಾದ್ದು ನಡೆಯುತ್ತಿದೆ ಎಂದು ಕಿಡಿಕಾರಿದರು.