ದಾವಣಗೆರೆ: ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಆಪ್ತ ಸಹಾಯಕ ಭ್ರಷ್ಟಾಚಾರ ಒಂದೇ ಅಲ್ಲ, ಇಡೀ ಬಿಜೆಪಿ ಸರ್ಕಾರವೇ ಭ್ರಷ್ಟಾಚಾರದಲ್ಲಿದೆ. ಇಲ್ಲಿ ವಿಜಯೇಂದ್ರನೇ ಡಿ ಪ್ಯಾಕ್ಟರ್ ಸಿಎಂ, ಯಡಿಯೂರಪ್ಪ ಡಿ ಜೀರೋ ಸಿಎಂ ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಶೇ.20 – ಶೇ.25 ಪರ್ಸೆಂಟ್ ಸರ್ಕಾರ. ಲಂಚ ಇಲ್ಲದೇ ಏನು ಆಗುತ್ತಿಲ್ಲ ಲಂಚ ನಡೆಯುತ್ತಿರುವುದು ಸತ್ಯ, ಯಡಿಯೂರಪ್ಪನವರ ಮಗ ಹಾಗೂ ಅಳಿಯ ಬ್ಯಾಂಕ್ ಮುಖಾಂತರ ಲಂಚ ತೆಗೆದುಕೊಳ್ಳುತ್ತಿದ್ದಾರೆ. ಯಡಿಯೂರಪ್ಪನವರ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸರ್ಕಾರದಲ್ಲಿ ಲಂಚ ಇರುವುದು ಸತ್ಯ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
Advertisement
Advertisement
ಇನ್ನು ರಾಮಲು ಪಿಎ ರಾಜಣ್ಣ ಭ್ರಷ್ಟಾಚಾರ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಮಾಜ ಕಲ್ಯಾಣ ಸಚಿವ ಆಪ್ತ ಸಹಾಯಕ ಅರೆಸ್ಟ್ ಆಗಿದ್ದು, ಯಡಿಯೂರಪ್ಪನವರ ಮಗ ಕಂಪ್ಲೆಂಟ್ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಇಡೀ ಸರ್ಕಾರದಲ್ಲಿ ಲಂಚ ಇಲ್ಲದೇ ಏನೂ ಕೆಲಸ ಆಗೋಲ್ಲ ಎಂದರು.
Advertisement
ಸಿದ್ದರಾಮಯ್ಯನವರ ಪಾಪದ ಕೊಡ ತುಂಬಿದೆ ಎಂಬ ಕುಮಾರಸ್ವಾಮಿ ಹೇಳಿಕೆ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಸುಳ್ಳು ಹೇಳ್ತಾ ಹೋಗ್ತಾರೆ. ಕುಮಾರಸ್ವಾಮಿಯವರೇನು ನಮ್ಮ ಪಕ್ಷದವರು, ಅವರು ಹೇಳಿದ್ದೆಲ್ಲ ವೇದವಾಕ್ಯ ಅಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಜಗಳ, ಗುಂಪುಗಾರಿಕೆ ಇಲ್ಲ. ಎಲ್ಲರು ಒಗ್ಗಟ್ಟಾಗಿ ಇದ್ದೇವೆ, ಎಲೆಕ್ಷನ್ ಆದ ಮೇಲೆ ನಮ್ಮ ಸರ್ಕಾರ ಬರುತ್ತೆ. ಶಾಸಕರು ಸಿಎಲ್ ಪಿ ನಾಯಕನನ್ನು ಆಯ್ಕೆ ಮಾಡ್ತಾರೆ ಎಂದು ತಿಳಿಸಿದರು.
Advertisement
ಅನೇಕ ದಿನಗಳಿಂದ ಒತ್ತಾಯ ಮಾಡ್ತಾ ಇದ್ದೀವಿ, ಕೋವಿಡ್ ನಿಂದ ಮೃತಪಟ್ಟವರಿಗೆ ಪರಿಹಾರ ಕೊಡಿ ಎಂದು ಒತ್ತಾಯಿಸಿದ್ದೇವೆ. ಸುಪ್ರಿಂ ಕೋರ್ಟ್ ಈಗ ಹೇಳಿದೆ ಕೋವಿಡ್ ನಿಂದ ಮೃತರಾದರೆ ಪರಿಹಾರ ಕೊಡಲೇಬೇಕು ಎಂದ್ರು. ಇದನ್ನೂ ಓದಿ: ರಾಜಕಾರಣದಲ್ಲಿ ನಾನು LKG ಸ್ಟೂಡೆಂಟ್, ಸಿಎಂ ರೇಸ್‍ನಲ್ಲಿ ನಾನಿಲ್ಲ: ಜಮೀರ್