ವಿಜಯಲಕ್ಷ್ಮಿ ದರ್ಶನ್‍ಗೆ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿ

Public TV
1 Min Read
VIJAYALAKSHMI DARSHAN

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟಿವ್ ಆಗಿದ್ದಾರೆ. ಅಂತೆಯೇ ಇದೀಗ ಅವರು ತಮ್ಮ ಅಭಿಮಾನಿಗಳ ಜೊತೆ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

VIJAYALAKSHMI 768x425 1

ಹೌದು.. ತಮ್ಮ ನೇರ ನುಡಿ ಹಾಗೂ ಸಹಾಯದಿಂದಾಗಿ ಹಾಗೂ ಸಿನಿಮಾ ಮೂಲಕ ದರ್ಶನ್ ಅವರು ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಮೂಲಕ ಅವರು ತಮ್ಮ ಅಭಿಮಾನಿಗಳ ಮನದಲ್ಲಿ ‘ಬಾಸ್’ ಅಂತಲೇ ಕರೆಸಿಕೊಳ್ಳುತ್ತಿದ್ದಾರೆ. ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ತಮ್ಮದೇ ದಾರಿಯಲ್ಲಿ ಅನೇಕರಿಗೆ ನೆರವಾಗಿದ್ದಾರೆ.

darshan vijayalakshmi 2

ಕೆಲ ದಿನಗಳ ಹಿಂದಷ್ಟೇ ವಿಜಯಲಕ್ಷ್ಮಿ ಹೊಸ ಉದ್ಯಮವನ್ನು ಆಂಭಿಸಿದ್ದರು. ‘ಮೈ ಫ್ರೆಶ್ ಬಾಸ್ಕೆಟ್’ ಎಂಬ ಆನ್ ಲೈನ್ ಆ್ಯಪ್ ಒಂದನ್ನು ತೆರೆದು ರೈತರಿಗೆ ನೆರವಾಗಿದ್ದರು. ಆ ಆ್ಯಪ್ ಮೂಲಕ ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ನೀಡಬಹುದಾಗಿತ್ತು. ಅಲ್ಲದೆ ಗ್ರಾಹಕರಿಗೂ ರೈತರಿಂದ ನೇರವಾಗಿ ತರಕಾರಿ ಹಾಗೂ ಹಣ್ಣುಗಳು ತಲುಪುತ್ತಿದ್ದವು. ಹೀಗೆ ರೈತರಿಗೆ ನೆರವಾಗುವ ಸಲುವಾಗಿ ವಿಜಯಲಕ್ಷ್ಮಿ ಅವರು ಮಾಡಿದ ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

VIJAYALAKSHMI

ವಿಜಯಲಕ್ಷ್ಮಿ ಅವರು ಹೊಸದಾಗಿ ಆರಂಭಿಸಿರುವ ಆನ್‍ಲೈನ್ ಉದ್ಯಮಕ್ಕೆ ಸಂಬಂಧಪಟ್ಟಂತೆ ಇದೀಗ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಟೈಮ್ಸ್ ಬ್ಯುಸಿನೆಸ್ ನವರು ಉದಯೋನ್ಮುಖ ಮಹಿಳಾ ಉದ್ಯಮಿ ಎಂಬ ಪ್ರಶಸ್ತಿಯನ್ನು ವಿಜಯಲಕ್ಷ್ಮಿ ಅವರಿಗೆ ನೀಡಿ ಸನ್ಮಾನಿಸಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಜೊತೆಗೆ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂತೋಷ ಹಂಚಿಕೊಂಡಿದ್ದಾರೆ. ಈ ವಿಚಾರ ದರ್ಶನ್ ಅವರ ಅಭಿಮಾನಿಗಳಲ್ಲೂ ಸಂತಸ ತಂದಿದೆ.

Share This Article
Leave a Comment

Leave a Reply

Your email address will not be published. Required fields are marked *