ವಿಜಯಪುರ: ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ(ಜಿಲ್ಲಾ ಪಂಚಾಯತ್) ಮತ್ತು ಜಿಲ್ಲಾ ಹಾಪ್‍ಕಾಮ್ಸ್ ಸಹಯೋಗದಲ್ಲಿ ಸಂಚಾರಿ ಸರಕು ವಾಹನಕ್ಕೆ ನಗರದಲ್ಲಿ ಚಾಲನೆ ನೀಡಲಾಯಿತು. ಸಂಚಾರಿ ಸರಕು ವಾಹನದ ಮೂಲಕ ಹಣ್ಣು ಮತ್ತು ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವುದು ಇದರ ಗುರಿ ಆಗಿದೆ.
ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹಸಿರು ನಿಶಾನೆ ತೋರಿಸುವ ಮೂಲಕ ಸಂಚಾರಿ ಸರಕು ವಾಹನಕ್ಕೆ ಚಾಲನೆ ನೀಡಿದರು. ಇಂದಿನಿಂದ ನಗರದಲ್ಲಿ ಮನೆಗಳ ಬಾಗಿಲಿಗೆ ತೆರಳಿ ಹಣ್ಣು ತರಕಾರಿ ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ಈ ವಾಹನಗಳು ಪೂರೈಸಲಿವೆ. ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚುತ್ತಿದ್ದು, ಸಾಮಾಜಿಕ ಅಂತರ ಕಾಪಾಡುವುದು ಸವಾಲಾಗಿದೆ. ಹೀಗಾಗಿ ಸಂಚಾರಿ ಸರಕು ವಾಹನಗಳನ್ನು ಜಾರಿಗೆ ತರಲಾಗಿದೆ.
Advertisement
Advertisement
ಕಾರ್ಯಕ್ರಮದಲ್ಲಿ ವಿಜಯಪುರ ತೋಟಗಾರಿಕೆ ಉಪನಿರ್ದೇಶಕ (ಜಿ.ಪಂ), ಹಾಪ್‍ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರು, ಸಹಾಯಕ ತೋಟಗಾರಿಕೆ ನಿರ್ದೇಶಕರು, ಸಹಾಯಕ ತೋಟಗಾರಿಕೆ ಅಧಿಕಾರಿಗಳು, ವ್ಯವಸ್ಥಾಪಕರು ಮತ್ತು ಕಚೇರಿ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.