ಲಕ್ನೋ: ಮೃತ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಸೋದರ ದೀಪ್ ಪ್ರಕಾಶ್ ದುಬೆ ಬಂಧನಕ್ಕೆ ಸರ್ಕಾರ ಮುಂದಾಗಿದ್ದು, ಸುಳಿವು ನೀಡಿದವರಿಗೆ 20 ಸಾವಿರ ರೂ. ಬಹುಮಾನ ನೀಡಲಾಗುದು ಎಂದು ಉತ್ತರ ಪ್ರದೇಶ ಸರ್ಕಾರ ಘೋಷಣೆ ಮಾಡಿದೆ.
ಜುಲೈ 3ರಂದು ವಿಕಾಸ್ ದುಬೆ ಮತ್ತು ಆತನ ಗ್ಯಾಂಗ್ ಎಂಟು ಪೊಲೀಸರನ್ನು ಕೊಂದಿದ್ದರು. ಕಾನ್ಪುರದ ಬಿಕೂರೂ ಗ್ರಾಮದಲ್ಲಿ ನಡೆದ ಗುಂಡಿನ ದಾಳಿ ಬಳಿಕ ವಿಕಾಸ್ ದುಬೆ ಮತ್ತು ದೀಪ್ ಪ್ರಕಾಶ್ ದುಬೆ ಇಬ್ಬರೂ ಎಸ್ಕೇಪ್ ಆಗಿದ್ದರು. ನಂತರ ವಿಕಾಸ್ ದುಬೆಯನ್ನು ಮಧ್ಯಪ್ರದೇಶ ಉಜ್ಜೈನ್ ನಲ್ಲಿ ಬಂಧಿಸಲಾಗಿತ್ತು. ಬಂಧನದ ಮರುದಿನ ವಿಕಾಸ್ ದುಬೆ ಯನ್ನು ಎನ್‍ಕೌಂಟರ್ ಮಾಡಲಾಗಿತ್ತು.
Advertisement
Advertisement
ಕಾನ್ಪುರದಲ್ಲಿ ನಡೆದ ಗೋಲಿಬಾರ್ ನಡೆದ ದಿನದಿಂದ ದೀಪ್ ಪ್ರಕಾಶ್ ಭೂಗತವಾಗಿದ್ದಾನೆ. ನಮ್ಮ ಕೈಗೆ ದೀಪ್ ಪ್ರಕಾಶ್ ಸಿಕ್ಕರೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಕಾನ್ಪುರ ಎನ್‍ಕೌಂಟರ್, ವಿಕಾಸ್ ದುಬೆ ಜೊತೆ ಯಾರು ಸಂಪರ್ಕದಲ್ಲಿದ್ದರು ಎಂಬಿತ್ಯಾದಿ ವಿಷಯಗಳು ತಿಳಿಯಲಿವೆ ಎಂದು ಎಸ್‍ಟಿಎಫ್ ಹಿರಿಯ ಅಧಿಕಾರಿ ಹೇಳಿದ್ದಾರೆ.
Advertisement
ಗೋಲಿಬಾರ್ ನಲ್ಲಿ ದೀಪ್ ಪ್ರಕಾಶ್ ದುಬೆ ಭಾಗಿಯಾಗಿರುವ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ. ದೀಪ್ ಪ್ರಕಾಶ್ ಲಕ್ನೋನ ಕೃಷ್ಣಾ ನಗರದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದನು.
Advertisement