ವಾಷಿಂಗ್ಟನ್: ಬಾಸ್ಕೆಟ್‍ಗೆ ಬಾಲ್ ಹಾಕಲು ಸಹೋದರನೊಬ್ಬ ತನ್ನ ತಂಗಿಗೆ ಸಹಾಯ ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬಾಲಕನ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಬ್ಯಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ಈ ವೀಡಿಯೊವನ್ನು ಟ್ವೀಟ್ ಮಾಡಿ, “ಈ ಸಹೋದರ ತನ್ನ ಸಹೋದರಿಗೆ ಬಾಸ್ಕೆಟ್‍ಗೆ ಬಾಲ್ ಹಾಕಲು ಸಹಾಯ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಂಗವಿಕಲ ಪೋರನ ಪ್ರತಿಭೆಗೆ ವಿವಿಎಸ್ ಲಕ್ಷ್ಮಣ್ ಸೆಲ್ಯೂಟ್
Advertisement
This brother helping his sister get buckets is definitely the Twitter content I’m here for…????❤️????❤️https://t.co/VwlP2mHY8j
— Rex Chapman???????? (@RexChapman) May 24, 2020
Advertisement
14 ಸೆಕೆಂಡುಗಳ ವಿಡಿಯೋದಲ್ಲಿ ಬಾಲಕ ಬಾಸ್ಕೆಟ್ ಪೋಲ್ ಹಿಡಿದು ಕೆಳಗೆ ಬಾಗಿಸುತ್ತಾನೆ. ಈ ಮೂಲಕ ವಿಕಲಚೇತನ ಸಹೋದರಿ ಬಾಸ್ಕೆಟ್‍ನಲ್ಲಿ ಬಾಲ್ ಹಾಕಲು ಶ್ರಮಿಸುತ್ತಾರೆ. ಸಹೋದರಿ ಬಾಸ್ಕೆಟ್‍ನಲ್ಲಿ ಬಾಲ್ ಹಾಕಿದಾಗ ಬಾಲಕ ಸಂಭ್ರಮ ಮುಗಿಲು ಮುಟ್ಟಿತ್ತು.
Advertisement
ರೆಕ್ಸ್ ಚಾಪ್ಮನ್ ಅವರು ಟ್ವೀಟ್ ಮಾಡಿದ ವಿಡಿಯೋ ಕೆಲವೇ ಕ್ಷಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನ 3.5 ಮಿಲಿಯನ್ ನೆಟ್ಟಿಗರು ವೀಕ್ಷಿಸಿದ್ದು, 43 ಸಾವಿರಕ್ಕೂ ಹೆಚ್ಚು ಜನರು ರಿಟ್ವೀಟ್ ಮಾಡಿದ್ದಾರೆ. ಕೆಲವರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
Advertisement
Assist of the year!
— Jon Penberthy (@penberthy_jon) May 24, 2020
ಅಂತರ್ಜಾಲದಲ್ಲಿ ಇದು ಇಂದಿನ ಅತ್ಯಂತ ಸುಂದರವಾದ ವಿಷಯ. ಇಂತಹ ಸಹೋದರ ಸಿಗಲು ಪುಣ್ಯ ಮಾಡಿರಬೇಕು. ಈ ದೃಶ್ಯ ಮನಸ್ಸಿಗೆ ತುಂಬಾ ಹತ್ತಿರವಾಗಿದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲ ನೆಟ್ಟಿಗರು ಹೃದಯಸ್ಪರ್ಶಿ ವಿಡಿಯೋಗಳನ್ನು ರಿಟ್ವೀಟ್ ಮಾಡಿದ್ದಾರೆ.
pic.twitter.com/TA4KkdEU1Z….kids always care each other
— Chetan agarwal (@Chetanniketa) May 24, 2020