– ಚುನಾವಣೆ ಘೋಷಣೆ ನಂತ್ರ 2 ಕೋಟಿಗೂ ಅಧಿಕ ಹಣ ವಶ
ಪಾಟ್ನಾ: ಬಿಹಾರದಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತದಾನದ ವ್ಯಾಪ್ತಿಯಲ್ಲಿ ಇದುವರೆಗೂ 2 ಕೋಟಿಗೂ ಅಧಿಕ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೀಗ ಬಿಹಾರದ ದರ್ಬಂಗಾ ಜಿಲ್ಲೆಯ ಪೊಲೀಸರು ವಾಹನವನ್ನು ಪರಿಶೀಲಿಸುವಾಗ ಬರೋಬ್ಬರಿ 1.10 ಕೋಟಿ ರೂಪಾಯಿ ಪತ್ತೆಯಾಗಿದೆ. ಇದನ್ನೂ ಓದಿ: ಬಿಹಾರ ಚುನಾವಣೆ – ಆರ್‌ಜೆಡಿ, ಬಿಜೆಪಿ ಸೀಟ್ ಹಂಚಿಕೆ ಬಹುತೇಕ ಪೂರ್ಣ
ಪೊಲೀಸರು ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರೋಹಿತ್ ಭಂಡರ್‍ವಾಲ್ ಮತ್ತು ಸಂತೋಷ್ ಪಾಸ್ವಾನ್ ಎಂದು ಗುರುತಿಸಲಾಗಿದೆ. ಇಬ್ಬರು ಮಧುಬಾನಿ ನಿವಾಸಿಗಳಾಗಿದ್ದು, ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Advertisement
Advertisement
ಆರೋಪಿಗಳು ಹಣವನ್ನು ಮಧುಬಾನಿಯಿಂದ ಸ್ಕಾರ್ಪಿಯೋ ವಾಹನದಲ್ಲಿ ತೆಗೆದುಕೊಂಡು ಸಮಸ್ತಿಪುರಕ್ಕೆ ತಲುಪಿಸಲು ಹೋಗುತ್ತಿದ್ದರು. ಆದರೆ ಪೊಲೀಸರು ವಿಶಾನ್ಪುರದಲ್ಲಿ ಪರಿಶೀಲನೆ ವೇಳೆ ಈ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ದರ್ಬಂಗಾ ಜಿಲ್ಲಾಧಿಕಾರಿ ಡಾ.ತ್ಯಾಗರಾಜನ್ ತಿಳಿಸಿದ್ದಾರೆ.
Advertisement
Advertisement
ಮಂಗಳವಾರ ತಾನೇ ರಾಜ್ಯದ ಕಾಲೀ ಚೆಕ್ ಪೋಸ್ಟ್ ನಲ್ಲಿ ವಾಹನದಿಂದ 1.73 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಅದೇ ಚೆಕ್ ಪೋಸ್ಟ್ ನಲ್ಲಿ ಮತ್ತೊಂದು ವಾಹನದಿಂದ ಸುಮಾರು 450 ಗ್ರಾಂ ಚಿನ್ನವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಪಾಟ್ನಾದಲ್ಲಿ ಪೊಲೀಸರು ಆರ್‌ಜೆಡಿ ಮುಖಂಡರ ವಾಹನದಿಂದ 74 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದರು. ಹೀಗಾಗಿ ಬಿಹಾರದಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತದಾನದ ವ್ಯಾಪ್ತಿಯಲ್ಲಿ 2 ಕೋಟಿ ರೂಪಾಯಿಗಿಂತ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ಚುನಾವಣೆ ನಡೆಯಲಿದೆ. ಫಲಿತಾಂಶ ನವೆಂಬರ್ 10ಕ್ಕೆ ಪ್ರಕಟವಾಗಲಿದೆ. ಮೊದಲ ಹಂತದ ಮತದಾನಕ್ಕೆ ಗುರುವಾರದಿಂದ ನಾಮಪತ್ರ ಸಲ್ಲಿಕೆಯಾಗಲಿದೆ. 243ರ ಪೈಕಿ 71 ಕ್ಷೇತ್ರಗಳಿಗೆ ಅ.28 ರಂದು ಚುನಾವಣೆ ನಡೆಯಲಿದೆ.