ಬೆಂಗಳೂರು: ಕೋವಿಡ್ 19 ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿ ರಸ್ತೆಗೆ ಇಳಿದಿದ್ದ ವಾಹನಗಳ ಬಿಡುಗಡೆ ಪ್ರಕ್ರಿಯೆ ಆರಂಭಗೊಂಡಿದೆ.
ಲಾಕ್‍ಡೌನ್ ಸಮಯದಲ್ಲಿ ಒಟ್ಟು 36 ಸಾವಿರಕ್ಕೂ ಅಧಿಕ ವಾಹನಗಳನ್ನು ಬೆಂಗಳೂರು ಪೊಲೀಸರು ಸೀಜ್ ಮಾಡಿದ್ದರು. ಸೀಜ್ ಆಗಿದ್ದ ವಾಹನ ರಿಲೀಸ್ ಆಗಬೇಕಾದರೆ ಹಳೇ ಕೇಸ್ ಕ್ಲೀಯರ್ ಮಾಡಲೇಬೇಕು. ಹಳೆ ಕೇಸ್ ಫೈನ್ ಜೊತೆ ಲಾಕ್ ಡೌನ್ ನಿಯಮ ಉಲ್ಲಂಘನೆಯ 500 ರೂ. ದಂಡವನ್ನು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ.
Advertisement
Advertisement
ಪೊಲೀಸರು ಸೀಜ್ ಆದ ವಾಹಗಳನ್ನು ಹಲವೆಡೆ ಖಾಸಗಿ ಜಾಗದಲ್ಲಿ ಪಾಕಿರ್ಂಗ್ ಮಾಡಿದ್ದರು. ಆ ಪಾಕಿರ್ಂಗ್ ಚಾರ್ಜ್ ಕೂಡ ವಾಹನ ಸವಾರರ ಮೇಲೆ ಹಾಕಲಾಗುತ್ತಿದೆ. ಇದನ್ನೂ ಓದಿ : ತಜ್ಞರ ಸಲಹೆ ಆಧರಿಸಿ ಅನ್‍ಲಾಕ್ ಸ್ವರೂಪ ನಿರ್ಧಾರ: ಡಾ.ಕೆ.ಸುಧಾಕರ್
Advertisement
ಸೀಜ್ ಆದ ವಾಹನಗಳನ್ನು ಪಡೆಯಲು ದಾಖಲೆಗಳನ್ನ ಸಲ್ಲಿಸಬೇಕು. 100 ರೂ. ಬಾಂಡ್ ಪೇಪರ್, ಆಧಾರ್ ಕಾರ್ಡ್, ಡಿಎಲ್ ಮತ್ತು ಆರ್‍ಸಿ ದಾಖಲೆ ಝರಾಕ್ಸ್, ಒಂದು ಫೋಟೋ ಕಡ್ಡಾಯ ಕೊಟ್ಟು ವಾಹನವನ್ನು ಪಡೆದುಕೊಳ್ಳಬೇಕು.
Advertisement
ನಗರದ ಎಂಟು ವಲಯದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೀಜ್ ಆದ ವಾಹನಗಳನ್ನ ದಂಡ ಪಡೆದು ಮಾಲೀಕರಿಗೆ ಹಿಂದಿರುಗಿಸುವ ಪ್ರಕ್ರಿಯೆ ನಡೆಯುತ್ತಿದೆ. ಸೀಜ್ ಆಗಿರುವ ವಾಹನಗಳನ್ನು ಪಡೆಯಲು ವಾಹನ ಸವಾರರು ಸೂಕ್ತ ದಾಖಲೆಗಳೊಂದಿಗೆ ಹೋಗಿ ದಂಡ ಕಟ್ಟಿ ವಾಹನ ಬಿಡಿಸಿಕೊಳ್ಳಬಹುದು. ಈಗಾಲೇ ಹಲವಡೆ ವಿಚಾರ ತಿಳಿದು ವಾಹನಗಳನ್ನ ಬಿಸಿಡಿಕೊಳ್ಳಲು ಮಾಲೀಕರು ಮುಂದಾಗಿದ್ದಾರೆ.
ಸೀಜ್ ಮಾಡಿದ ವಾಹನಗಳ ಮೇಲೆ ದಂಡ ಹಾಕಿ ವಾಹನಗಳನ್ನ ಮಾಲೀಕರಿಗೆ ಹಿಂದಿರುಗಿಸುವಂತೆ ಪೊಲೀಸರಿಗೆ ಹೈಕೋರ್ಟ್ ನಿನ್ನೆ ಸೂಚನೆ ನೀಡಿತ್ತು.