ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪೊಲೀಸರು ಗಾಂಜಾ ಪ್ರಕರಣಗಳನ್ನು ಬೆನ್ನಟ್ಟುತ್ತಿದ್ದು, ಬಗೆದಷ್ಟು ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಮೂರು ಪ್ರಕರಣಗಳನ್ನು ಪೊಲೀಸರು ಭೇಧಿಸಿದ್ದು, ಇಂದು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ನೂರ್ ಅಹ್ಮದ್ ಹಾಗೂ ಅಕ್ಷಯ ವೇರ್ಣೆಕರ ಬಂಧಿತ ಆರೋಪಿಗಳು. ನಗರದಲ್ಲಿ ನಡೆಯುತ್ತಿರುವ ಗಾಂಜಾ ಹಾವಳಿಯ ಜಾಡು ಹಿಡಿದು ಹೊರಟಿರುವ ಪೊಲೀಸರಿಗೆ ಬಗೆದಷ್ಟು ಪ್ರಕರಣಗಳು ಪತ್ತೆಯಾಗುತ್ತಿದ್ದು, ಉಪನಗರ ಠಾಣೆ ಪೊಲೀಸರು ಇಂದು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಗಾಂಜಾ ಹಾಗೂ ಸಾಗಾಟಕ್ಕೆ ಬಳಸುತ್ತಿದ್ದ ಬೈಕ್ ಜಪ್ತಿ ಮಾಡಿದ್ದಾರೆ.
ನಗರದ ಪ್ರಮುಖ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರೆಂದು ತಿಳಿಯುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆಯ ಸಿಬ್ಬಂದಿ ಇಬ್ಬರನ್ನು ಪತ್ತೆ ಹಚ್ಚಿ ಬಂಧಿಸಿ ಅರ್ಧ ಕೆ.ಜಿ.(500 ಗ್ರಾಂ.) ಗಾಂಜಾ ವಶಪಡಿಸಿಕೊಡಿದ್ದಾರೆ.
ಶುಕ್ರವಾರವಷ್ಟೇ ತಿಮ್ಮಸಾಗರದ ವಿಶ್ವನಾಥ ಮಲ್ಲಪ್ಪ ಕರಡಿಗುಡ್ಡ ಹಾಗೂ ಮಂಟೂರ ರಸ್ತೆಯ ನರೇಶಕುಮಾರ ರಾಜಣ್ಣ ನಾಯಕಂಟಿ ಈ ಇಬ್ಬರನ್ನು ಪೊಲೀಸರು ಹಿಡಿದಿದ್ದರು. ಅವರಿಂದ 1.795 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದರು. ಇಂದು ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.