ಮೈಸೂರು: 45 ವರ್ಷ ಮೇಲ್ಪಟ್ಟ 10 ಲಕ್ಷಕ್ಕೂ ಅಧಿಕ ಜನರಿಗೆ ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಲಸಿಕೆ ನೀಡಲಾಗಿದೆ. ಕೊರೊನಾ ಸೋಂಕಿನ ಮೂರನೇ ಅಲೆ ಬರುವ ಮುನ್ನವೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿ ಕ್ಷಿಪ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯ 34,06,521 ಜನಸಂಖ್ಯೆಯಲ್ಲಿ – 24,75,988 ಜನರಿಗೆ ಲಸಿಕೆ ನೀಡಬೇಕಾಗಿದ್ದು, ಇಲ್ಲಿವರೆಗೂ 10,30,825 ಮಂದಿಗೆ ನೀಡಲಾಗಿದೆ. 45 ವರ್ಷ ಮೇಲ್ಪಟವರಿಗೆ ಮೊದಲ ಡೋಸ್‍ನಲ್ಲಿ ಶೇ. 73.54ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲಿ ಮೈಸೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಎರಡನೇ ಡೋಸ್ 1,24,674 ಮಂದಿಗೆ ಹಾಕಲಾಗಿದೆ.
Advertisement
ಅದೇ ರೀತಿ 18ರಿಂದ 44 ವರ್ಷದೊಳಗಿನವರಲ್ಲಿ ಇದುವರೆಗೂ 1,34,277 ಲಸಿಕೆ ಹಾಕಲಾಗಿದೆ. ಲಸಿಕೆ ಪಡೆದರೆ ಜನರ ಜೀವ ಸುರಕ್ಷಿತವಾಗಿರಲಿದ್ದು ಸೋಂಕು ತಗುಲಿದರೂ ಚಿಕಿತ್ಸೆ ನೀಡುವುದು ಸುಲಭವಾಗಲಿದೆ. ಹೀಗಾಗಿ ನಿತ್ಯ ಗರಿಷ್ಠ ಮಟ್ಟದಲ್ಲಿ ಲಸಿಕೆ ನೀಡುವ ಗುರಿ ನಿಗದಿಪಡಿಸಿಕೊಂಡಿದ್ದು, ಪ್ರಸ್ತುತ ಲಸಿಕೆ ಲಭ್ಯತೆ ಪ್ರಕಾರ ದಿನ ಸುಮಾರು 6,000 ಮಂದಿಗೆ ವ್ಯಾಕ್ಸಿನೇಷನ್ ಮಾಡಲಾಗುತ್ತಿದೆ.
Advertisement
170 ಪ್ರಾಥಮಿಕ ಆರೋಗ್ಯ ಕೇಂದ್ರ, 6 ಸಾರ್ವಜನಿಕರ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆ, ಮೆಡಿಕಲ್ ಆಸ್ಪತ್ರೆ, ಇಎಸ್‍ಐ, ರೈಲ್ವೆ ಹಾಗೂ ಬೀಡಿ ಕಾರ್ಮಿಕರ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ನಿತ್ಯವೂ ಲಸಿಕೆ ಲಭ್ಯತೆ ಆಧಾರದ ಮೇಲೆ ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು, ನಿಗದಿತ ಸಮಯದೊಳಗೆ ಗುರಿ ತಲುಪಲು ಜಿಲ್ಲಾಡಳಿತ ಶ್ರಮಿಸುತ್ತಿದೆ.
Advertisement
Advertisement
ವೈದ್ಯರು, ಪೊಲೀಸರು, ಆರೋಗ್ಯ ಕಾರ್ಯಕರ್ತೆಯರು, ಪತ್ರಕರ್ತರು ಸೇರಿದಂತೆ ಹಲವರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಉಳಿದಂತೆ ವಿಶೇಷಚೇತನರು, ಕೈದಿಗಳು, ಶವಾಗಾರದಲ್ಲಿ ಕಾರ್ಯನಿರ್ವಹಿಸುವವರು, ಸ್ವಯಂಸೇವಕರು, ಶಿಕ್ಷಕರು, ಸಾರಿಗೆ ಇಲಾಖೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು, ಸೆಸ್ಟ್ ಸಿಬ್ಬಂದಿ, ನೀರು ಸರಬರಾಜು ಇಲಾಖೆ, ಅಗ್ನಿಶಾಮಕ ದಳ, ಅಂಚೆ ಇಲಾಖೆ, ಬೀದಿಬದಿ ವ್ಯಾಪಾರಿಗಳು, ಭದ್ರತಾ ಸಿಬ್ಬಂದಿ, ನ್ಯಾಯಾಲಯ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಸ್ಪತ್ರೆಗಳಿಗೆ ಔಷಧಗಳನ್ನು ನೀಡುತ್ತಿರುವವರಿಗೆ ವ್ಯಾಕ್ಸಿನ್ ಹಾಕಲಾಗುತ್ತಿದೆ.
ಮೇನಲ್ಲಿ ಸಾವಿರಕ್ಕೂ ಅಧಿಕ ಸಾವು:
ಕೋವಿಡ್ ಎರಡನೇ ಅಲೆಯ ಅಬ್ಬರದಲ್ಲಿ ಮೈಸೂರು ನಗರದಲ್ಲೇ ಮೇ ತಿಂಗಳಲ್ಲಿ ಮೃತಪಟ್ಟವರ ಸಂಖ್ಯೆ ಒಂದು ಸಾವಿರಕ್ಕೂ ಹೆಚ್ಚು. ವಿವಿಧ ಅಂಕಿ ಅಂಶಗಳ ಪ್ರಕಾರ ಈ ಸಂಖ್ಯೆ ಸತ್ಯವಾಗಿದೆ. ಮೈಸೂರು ನಗರದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಒಂದು ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರ ನಡೆದಿದೆ. ಇದನ್ನೂ ಓದಿ: ಮೈಸೂರಲ್ಲಿ ಕೊರೊನಾ ಡೆತ್ ರೇಟ್ ಹೆಚ್ಚಾಗೋಕೆ ಕಾರಣ ತಿಳಿಸಿದ ಡಿಸಿ ಬಗಾದಿ ಗೌತಮ್
ಮೈಸೂರು ಮಹಾನಗರ ಪಾಲಿಕೆಯ ಜನನ-ಮರಣ ವಿಭಾಗದ ದಾಖಲಾತಿಯ ಪ್ರಕಾರ ಮೇ ತಿಂಗಳಲ್ಲಿ ಒಂದು ಸಾವಿರ ಜನ ಮೃತಪಟ್ಟಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ 372 ಸೋಂಕಿತರ ಶವ ಸಂಸ್ಕಾರ ನಡೆದಿದೆ. ಜೂನ್ 6ರವರೆಗೂ 129 ಜನೆ ಅಂತ್ಯಸಂಸ್ಕಾರ 129 ಮಂದಿಯ ಮಾಡಲಾಗಿದೆ. ಇದನ್ನೂ ಓದಿ: 2 ರಿಂದ 4 ವಾರದ ಒಳಗಡೆ ಮೂರನೇ ಕೊರೊನಾ ಅಲೆ – ತಜ್ಞರ ಎಚ್ಚರಿಕೆ
ಕೋವಿಡ್‍ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕಾಗಿಯೇ ಪಾಲಿಕೆ ಆಡಳಿತ ಹಿಂದೂಗಳಿಗೆ ಮೂರು, ಮುಸ್ಲಿಮರಿಗೆ ಎರಡು, ಕ್ರಿಶ್ಚಿಯನ್ನರಿಗೆ ನಾಲ್ಕು ಒಟ್ಟು 9 ಸ್ಮಶಾನಗಳನ್ನು ಮೀಸಲಿಟ್ಟಿದೆ. ಇಲ್ಲಿ ನಡೆದಿರುವ ಅಂತ್ಯ ಸಂಸ್ಕಾರಗಳ ಲೆಕ್ಕವೇ ಮೇ ತಿಂಗಳಲ್ಲಿ ಒಂದು ಸಾವಿರ ದಾಟಿದೆ. ಕೋವಿಡ್‍ನಿಂದ ಮೃತಪಟ್ಟರೂ ಪಾಲಿಕೆ ವ್ಯಾಪ್ತಿಯ ಯಾವೊಂದು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸದೆ ತಮ್ಮ ಜಮೀನು, ಊರಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಿದವರ ಲೆಕ್ಕ ಇದರಲ್ಲಿ ಸೇರ್ಪಡೆಯಾಗಿಲ್ಲ. ಇದನ್ನೂ ಓದಿ: ದೇಶದಲ್ಲಿ 74 ದಿನಗಳ ನಂತ್ರ ಅತಿ ಕಡಿಮೆ ಸಕ್ರಿಯ ಪ್ರಕರಣ -ಗುಣಮುಖರ ಪ್ರಮಾಣ ಶೇ.96.16
ಮೈಸೂರಿನ ಆಸ್ಪತ್ರೆಗಳಿಗೆ ದಾಖಲಾಗಿದ್ದ ಜಿಲ್ಲೆಯ ಗ್ರಾಮೀಣ ಪ್ರದೇಶದವರು ಹಾಗೂ ಹೊರ ಜಿಲ್ಲೆಯ ಕೆಲವು ಕೋವಿಡ್ ಪೀಡಿತರು ಮೃತಪಟ್ಟ ಬಳಿಕ ಪಾಲಿಕೆಯ ಸ್ಮಶಾನಗಳಲ್ಲೇ ಅಂತ್ಯಸಂಸ್ಕಾರ ನಡೆಸಲಾಗಿದೆ. ಇದನ್ನೂ ಓದಿ: ವಿಶ್ವ ನಾಯಕರ ಪೈಕಿ ಶೇ.66 ಅಂಕದೊಂದಿಗೆ ಮೋದಿ ನಂಬರ್ 1