– ಹೀಂದಿರುಗಿ ಬಂದಾಗ ತಾಯಿಗೆ ಕಾದಿತ್ತು ಶಾಕ್
ಮಾಸ್ಕೋ: ತಾಯಿಯೊಬ್ಬಳು ತನ್ನ 10 ವರ್ಷದ ಮಗನನ್ನು 8 ದಿನಗಳ ಕಾಲ ಜಿರಳೆಗಳು ತುಂಬಿದ್ದ ಕೋಣೆಯಲ್ಲಿ ಕೂಡಿಹಾಕಿದ ಘಟನೆ ಮಾಸ್ಕೋದಲ್ಲಿ ನಡೆದಿದೆ.
Advertisement
ಬಾಲಕನನ್ನು ಮಿಖೈಲ್ (10) ಎಂದು ಗುರುತಿಸಲಾಗಿದೆ. ಈತನನ್ನು ತಾಯಿ ನಟಲ್ಯಾ ಅಜರೆನ್ಕೋವಾ(31) ಮಾಸ್ಕೋದ ಪೆರೆಡೆಲ್ಕಿನೋ ಏರಿಯಾದಲ್ಲಿರುವ ಅಪಾರ್ಟ್‍ಮೆಂಟ್ ನಲ್ಲಿ ಜಿರಳೆಗಳು ತುಂಬಿದ್ದ ಕೋಣೆಯಲ್ಲಿ ಕೂಡಿಹಾಕಿದ್ದಾಳೆ. ನಂತರ ವಾಕಿಂಗ್ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಹಾಕಿದ್ದಾಳೆ. ಹೀಗೆ ಹೋದವಳು 8 ದಿನಗಳ ಬಳಿಕ ಮನೆಗೆ ಬಂದಾಗ ಆಕೆಗೆ ಅಚ್ಚರಿ ಕಾದಿತ್ತು.
Advertisement
Advertisement
ಇತ್ತ ಕತ್ತಲೆ ಕೋಣೆಯಲ್ಲಿ ಒಂಟಿಯಾಗಿದ್ದ ಮಿಖೈಲ್ ಹೊಟ್ಟೆಗೆ ಸರಿಯಾಗಿ ಊಟವಿಲ್ಲದೆ ಬಳಲಿದ್ದನು. ಅಲ್ಲದೆ ಜಿರಳೇಗಳು ಮುತ್ತಿಕೊಂಡಿದ್ದ ಮನೆಯಲ್ಲಿ ಬಾಲಕನಿಗೆ ನರಕ ದರ್ಶನವಾಗಿದೆ. 4 ದಿನಗಳ ಕಾಲ ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಕೂಗಾಡ ತೊಡಗಿದನು. ಬಾಲಕನ ಅಲಳು ಕೇಳಿಸಿಕೊಂಡ ನೆರಮನೆಯವರು ಬಂದು ಆತನನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ನೆರೆ ಮನೆಯವರು ಬಾಲಕನಿಗೆ ತಿನ್ನಲು ಆಹಾರ ಮತ್ತು ಜ್ಯೂಸ್ ನೀಡಿದ್ದಾರೆ.
Advertisement
ಬಾಲಕನನ್ನು ರಕ್ಷಣೆ ಮಾಡಿದ ನಂತರ ಮಗುವಿನ ತಾಯಿಗಾಗಿ ನೆರೆಹೊರೆಯವರು ಕಾದಿದ್ದಾರೆ. ಆದರೆ ಮಹಿಳೆ ಬರದೇ ಇರುವುದನ್ನು ಗಮನಿಸಿ ತುರ್ತು ಸೇವೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಾಲಕನ ತಾಯಿ 2 ದಿನಕ್ಕಾಗಿ ಗೆಳೆಯರ ಮನೆಗೆ ಹೋದವಳು 8 ದಿನಗಳ ನಂತರ ಮರಳಿ ಮನೆಗೆ ಬಂದಿದ್ದಾಳೆ. ತಾಯಿ ಮಗನನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಎಲ್ಲಿ ಹೋಗಿದ್ದಳು ಎಂಬುದು ಮಾತ್ರ ನಿಗೂಢವಾಗಿದೆ.
ಸದ್ಯ ಪಾಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದು, ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನನ್ನ ಮಗು ನನಗೆ ಬೇಕು. ನನ್ನ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇನೆ ಎಂದು ಆರೋಪಿ ತಾಯಿ ಪೊಲೀಸರಿಗೆ ಹೇಳಿದ್ದಾಳೆ. ಆದರೆ ಮಹಿಳೆಗೆ ಜೈಲು ಶಿಕ್ಷೆಯಾಗಿದೆ.
ಕೇವಲ ಅಕ್ಕಿ ಮಾತ್ರ ನನಗೆ ತಿನ್ನಲು ಇಟ್ಟು ನನ್ನೊಬ್ಬನನ್ನೇ ಬಿಟ್ಟು ತಾಯಿ ನಾಯಿಯನ್ನು ವಾಕಿಂಗ್‍ಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಅಡುಗೆ ಮಾಡಿಕೊಳ್ಳಲು ನೀರು ಇರಲಿಲ್ಲ ಎಂದು ಮಿಖೈಲ್ ತನ್ನ ಅಳಲು ತೋಡಿಕೊಂಡಿದ್ದಾನೆ.