ನವದೆಹಲಿ: ಇತರೆ ರಾಜ್ಯಗಳಿಂದ ತವರು ರಾಜ್ಯಗಳಿಗೆ ವಲಸೆ ಹೋಗುತ್ತಿರುವ ವಲಸೆ ಕಾರ್ಮಿಕರಿಗೆ ಆಯಾ ರಾಜ್ಯ ಸರ್ಕಾರಗಳು ಕೆಲಸ ನೀಡಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಇಂದು ಲಾಕೌಡೌನ್ ನಲ್ಲಿ ವಲಸೆ ಕಾರ್ಮಿಕರ ಅನಾನುಕೂಲಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ.ಎಸ್.ಎ ಬೊಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠ ಹೊಸ ನಿರ್ದೇಶನಗಳನ್ನು ನೀಡಿದೆ. ಕಾರ್ಮಿಕರು ಇಚ್ಛೆ ಪಟ್ಟಲ್ಲಿ ಮುಂದಿನ 15 ದಿನಗಳಲ್ಲಿ ಅವರನ್ನು ತವರು ರಾಜ್ಯಗಳಿಗೆ ವಾಪಸ್ ಕಳುಹಿಸುವ ವ್ಯವಸ್ಥೆ ಮಾಡಬೇಕು. ಜಿಲ್ಲಾಡಳಿತ ಬ್ಲಾಕ್ ಮಟ್ಟದಲ್ಲಿ ವಲಸೆ ಕಾರ್ಮಿಕರ ನೋಂದಣಿ ಆರಂಭಿಸಿ ಅವರಿಗೆ ದಿನನಿತ್ಯ ಕೆಲಸ ನೀಡಬೇಕು ಎಂದು ಆದೇಶಿಸಿದೆ.
ಇಂದು ವಿಚಾರಣೆ ಈ ವೇಳೆ ಅರ್ಜಿಯಲ್ಲಿ ಭಾಗಿದಾರನ್ನಾಗಿ ಮಾಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸುಪ್ರೀಂಕೋರ್ಟಿಗೆ ಮನವಿ ಮಾಡಿತು. ಕೆಲವು ಸಲಹೆಗಳೊಂದಿಗೆ ಬಂದಿದ್ದು ತಮ್ಮನ್ನು ಪರಿಗಣಿಸಲು ಮನವಿ ಮಾಡಿದರು. ಆದರೆ ಇದಕ್ಕೆ ನಿರಾಕರಿಸಿದ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆವರೆಗೂ ಕಾಯುವಂತೆ ಸೂಚನೆ ನೀಡಿದೆ.
ಈ ಹಿಂದೆ ವಿಚಾರಣೆ ವೇಳೆ ವಲಸೆ ಕಾರ್ಮಿಕರಿಂದ ಪ್ರಯಾಣದ ದರ ಪಡೆಯದೇ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಬೇಕು ಹಾಗೂ ಪ್ರಯಾಣದ ವೇಳೆ ರಾಜ್ಯ ಸರ್ಕಾರಗಳು ಆಹಾರದ ವ್ಯವಸ್ಥೆ ಮಾಡಬೇಕು ಮಾಡಬೇಕು ಎಂದು ಸೂಚಿಸಿತ್ತು.