ಬೆಂಗಳೂರು: ಎರಡು ದಿನಗಳ ಹಾಸನ, ಶಿವಮೊಗ್ಗ ಜಿಲ್ಲೆಗಳ ಪ್ರವಾಸ ಮುಗಿಸಿ ಸಿಎಂ ಯಡಿಯೂರಪ್ಪ ಇಂದು ಮಧ್ಯಾಹ್ನ ಬೆಂಗಳೂರಿಗೆ ವಾಪಸಾದರು. ಈ ಸಂದರ್ಭದಲ್ಲಿ ಕಾವೇರಿ ನಿವಾಸದೆದುರು ಮಾತಾಡಿದ ಸಿಎಂ, ಬೆಂಗಳೂರಿಗೆ ಮರಳುತ್ತಿರುವ ವಲಸಿ ಕಾರ್ಮಿಕರು, ಉದ್ಯೋಗಿಗಳಿಗೆ ಟೆಸ್ಟಿಂಗ್ ಮಾಡಲು ಬಿಗಿ ಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ಮಾಧ್ಯಮದವರ ಸಲಹೆಯನ್ನು ಪಾಲಿಸಲಿದ್ದು, ಬಿಗಿ ಟೆಸ್ಟಿಂಗ್ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ಕೊಟ್ಟರು.
Advertisement
ಇನ್ನು ಮಾತು ಮುಂದುವರೆಸಿದ ಸಿಎಂ, ಮುಂದಿನ ವಾರ ಮುಂದಿನ ವಾರ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅರುಣ್ ಸಿಂಗ್ ಎರಡು ಮೂರು ದಿನ ರಾಜ್ಯದಲ್ಲಿದ್ದು,ಶಾಸಕರು, ಸಚಿವರು, ಸಂಸದರ ಜತೆ ಚರ್ಚೆ ಮಾಡ್ತಾರೆ. ಆ ಮೂಲಕ ರಾಜ್ಯದ ಸ್ಥಿತಿಗತಿ ಬಗ್ಗೆ ಅರುಣ್ ಸಿಂಗ್ ಚರ್ಚೆ ಮಾಡ್ತಾರೆ. ಅರುಣ್ ಸಿಂಗ್ ರವರು ಬಂದಾಗ ನಾನು ಪೂರ್ಣವಾಗಿ ಸಹಕರಿಸ್ತೇನೆ ಅಂತ ಇದೇ ವೇಳೆ ತಿಳಿಸಿದರು.
Advertisement
Advertisement
ಶಾಲಾ ಶುಲ್ಕ ಬಗ್ಗೆ ಚರ್ಚಿಸಿ ತೀರ್ಮಾನ
ಖಾಸಗಿ ಶಾಲೆಗಳ ಶುಲ್ಕ ಗೊಂದಲದ ಬಗ್ಗೆ ಮಾತಾಡಿದ ಸಿಎಂ, ಶುಲ್ಕದ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರ ಜತೆ ಚರ್ಚೆ ಮಾಡ್ತೇನೆ. ಖಾಸಗಿ ಶಾಲೆಗಳ ಕಷ್ಟ ಸುಖ ಏನಿದೆ ಅಂತ ನೋಡ್ಕೊಂಡು ಕಾನೂನು ಚೌಕಟ್ಟಿನಲ್ಲಿ ತೀರ್ಮಾನ ಮಾಡ್ತೇವೆ ಅಂತ ಸಿಎಂ ಯಡಿಯೂರಪ್ಪ ಭರವಸೆ ನೀಡಿದರು. ಇದನ್ನೂ ಓದಿ: ನಾಳೆಯಿಂದ ದೆಹಲಿಯಲ್ಲಿ ಅನ್‍ಲಾಕ್ – ಹೋಟೆಲ್‍ಗಳಲ್ಲಿ ಶೇ.50, ಮಾಲ್ ಫುಲ್ ಓಪನ್
Advertisement
ತಮ್ಮ ಹಾಸನ, ಶಿವಮೊಗ್ಗ ಜಿಲ್ಲೆಗಳ ಪ್ರವಾಸದ ಬಗ್ಗೆ ಹೇಳಿದ ಸಿಎಂ, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಬರ್ತಿದ್ದೇನೆ. ಇನ್ಮುಂದೆ ವಾರಕ್ಕೊಮ್ಮೆ ಜಿಲ್ಲೆಗಳಿಗೆ ಪ್ರವಾಸ ಮಾಡ್ತೇನೆ. ಆ ಮೂಲಕ ಜಿಲ್ಲೆಗಳಲ್ಲಿ ಕೋವಿಡ್, ಅಭಿವೃದ್ಧಿ ಪರಿಶೀಲನೆ ಮಾಡ್ತೇನೆ ಅಂದ್ರು. ಹಾಸನದಲ್ಲಿ ಏರ್ ಪೋರ್ಟ್ ನಿರ್ಮಾಣ ಕೆಲಸ ನಡೀತಿದೆ. ಶಿವಮೊಗ್ಗ ಏಜೆನ್ಸಿಯವ್ರಿಗೆ ಕಾಮಗಾರಿ ಕೊಟ್ಟು ಬೇಗ ಮುಗಿಸಲು ತಿಳಿಸಿದ್ದೇವೆ. ಶೀಘ್ರದಲ್ಲೇ ನಾನು ಮತ್ತು ದೇವೇಗೌಡರು ಅಲ್ಲಿಗೆ ತೆರಳಿ ಶಂಕುಸ್ಥಾಪನೆ ಮಾಡ್ತೇವೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ತಿಳಿಸಿದರು. ಇದನ್ನೂ ಓದಿ: ಗಂಡ ಹೆಂಡತಿ ಮಧ್ಯೆಯೇ ಅಸಮಾಧಾನ ಇರುತ್ತೆ, ಅಂಥಾದ್ರಲ್ಲಿ ಇಷ್ಟು ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಾಮಾನ್ಯ – ಸುಧಾಕರ್
ದಿಗ್ವಿಜಯ ಸಿಂಗ್ ರ ಆರ್ಟಿಕಲ್ 370 ಮರು ಪರಿಶೀಲನೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ತಿರುಕನ ಕನಸು ಕಾಣುವವರಿಗೆ ನಾನು ಏನೂ ಹೇಳೋದಿಲ್ಲ. ಅವರ ನಾಯಕತ್ವದ ಕೊರತೆಯಿಂದ ಅವರ ಪಕ್ಷ ಎಲ್ಲಿದೆ ಅನ್ನೋದು ಗೊತ್ತಿದೆ. ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ ಅನ್ನೋದು ಎಲ್ಲರೂ ಗಮನಿಸಿದ್ದಾರೆ ಅಂತ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ರು. ಪೆಟ್ರೋಲ್, ಡೀಸೆಲ್ ತೆರಿಗೆ ಇಳಿಕೆ ಮಾಡ್ತೀರಾ ಎಂಬ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ಕೊಡದೇ ಕೈ ಮುಗಿದು ಹೊರಟರು.