ಸೂರತ್: ಕೊರೊನಾ ಸಂಕಷ್ಟದ ಸಮಯದಲ್ಲಿ ವರ್ಕ್ ಫ್ರಮ್ ಹೋಮ್ ಮಾತು ಸಾಮಾನ್ಯವಾಗಿ ಕೇಳಿ ಬರುತ್ತಿತ್ತು. ಕೆಲ ಸಂಸ್ಥೆಗಳು ತಮ್ಮ ಸಂಸ್ಥೆಯ ನೌಕರರಿಗೆ ವರ್ಕ್ ಫ್ರಮ್ ಹೋಮ್ ನೀಡುವ ನಿರ್ಧಾರ ಮಾಡಿದ್ದವು. ಆದರೆ ಸಾಕಷ್ಟು ಸಮಯದಿಂದ ಮನೆಯಿಂದಲೇ ಕೆಲಸ ಮಾಡುತ್ತಿರುವುದು ನೌಕರರ ಮೇಲೆ ಹೆಚ್ಚಿನ ಒತ್ತಡ ಬೀಳುವ ಪ್ರಮಾದ ಎದುರಾಗಿದೆ.
ಇದಕ್ಕೆ ತಾಜಾ ಉದಾಹಣೆ ಎಂಬಂತೆ ಗುಜರಾತ್‍ನ ಸೂರತ್‍ನಲ್ಲಿ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ ಟೆಕ್ಕಿ ಕೆಲಸದ ಒತ್ತಡ ಸಹಿಸಿಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 32 ವರ್ಷದ ಎಂಜಿನಿಯರ್ ಜಿಗರ್ ಗಾಂಧಿ ತನ್ನ ಮನೆಯಲ್ಲೇ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದು, ಕಳೆದ 3 ವರ್ಷಗಳಿಂದ ನೋಡ್ಡಾ ಸೇರಿದ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ.
Advertisement
Advertisement
ಕೊರೊನಾ ಕಾರಣದಿಂದ ತನ್ನ ನಿವಾಸಕ್ಕೆ ಕಳೆದ 2 ತಿಂಗಳ ಹಿಂದೆ ವಾಪಸ್ ಆಗಿದ್ದ ಟೆಕ್ಕಿ, ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಕುಟುಂಬಸ್ಥರು ಡಿಸೆಂಬರ್ ನಲ್ಲಿ ಆತನಿಗೆ ನಿಶ್ಚಿತಾರ್ಥ ಮಾಡಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಟೆಕ್ಕಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಅವರ ತಂದೆ ಬನ್ಸಿನಾಲ್ ಅವರು ವಿದ್ಯುತ್ ಉಪಕರಣಗಳ ಅಂಗಡಿಯನ್ನು ಹೊಂದಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮಾನಸಿಕ ತಜ್ಞರು, ವರ್ಕ್ ಫ್ರಮ್ ಹೋಮ್ ಹೆಚ್ಚು ದಿನ ಮುಂದುವರಿದರೇ ಈ ರೀತಿಯ ಸಮಸ್ಯೆಗಳು ಎದುರಾಗುತ್ತದೆ. ಅಂತಹ ವ್ಯಕ್ತಿಗಳನ್ನು ಮೊದಲೇ ಗುರುತಿಸಿ ತಜ್ಞ ವೈದ್ಯರ ಸಲಹೆ ಪಡೆಯವುದು ಉತ್ತಮ ಎಂದಿದ್ದಾರೆ.