ಚೆನ್ನೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಸ್ಪಿನ್ನರ್ ವರುಣ್ ಚಕ್ರವರ್ತಿ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಗೆಳತಿ ನೇಹಾ ಖೆದ್ಕರ್ ಜೊತೆ ವರುಣ್ ಮದುವೆ ಚೆನ್ನೈನಲ್ಲಿ ನಡೆದಿದೆ.
ಐಪಿಎಲ್ ಬಳಿಕ ವರುಣ್ ಚಕ್ರವರ್ತಿಯನ್ನ ಆಸ್ಟ್ರೇಲಿಯಾ ವಿರುದ್ಧದ ಟಿಟ್ವೆಂಟಿ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದ್ರೆ ಭುಜ ನೋವಿನ ಹಿನ್ನೆಲೆ ವರುಣ್‍ಚಕ್ರವರ್ತಿ ಯುಎಇ ಯಿಂದ ನೇರವಾಗಿ ಭಾರತಕ್ಕೆ ಆಗಮಿಸಿದ್ದರು. ಕೆಕೆಆರ್ ತನ್ನ ಇನ್‍ಸ್ಟಾಗ್ರಾಂನಲ್ಲಿ ಇಬ್ಬರಿಗೂ ಮದುವೆ ಶುಭಾಶಯ ತಿಳಿಸಿದ್ದು. ವರುಣ್ ಬೌಲಿಂಗ್‍ಗೇ ನೇಹಾ ಬ್ಯಾಟ್ ಬೀಸುತ್ತಿರುವ ವೀಡಿಯೋವನ್ನ ಶೇರ್ ಮಾಡಿಕೊಂಡಿದೆ.
29 ವರ್ಷದ ವರುಣ್ ಚಕ್ರವರ್ತಿ ಮದುವೆ ಈ ವರ್ಷದ ಆರಂಭದಲ್ಲಿಯೇ ನಿಶ್ಚಯವಾಗಿತ್ತು. ಕೋವಿಡ್-19, ಲಾಕ್‍ಡೌನ್ ಹಿನ್ನೆಲೆ ಮದುವೆ ಮುಂದೂಡಲಾಗಿತ್ತು. ಲಾಕ್‍ಡೌನ್ ವೇಳೆ ವರುಣ್ ಚೆನ್ನೈನಲ್ಲಿ ಮತ್ತು ನೇಹಾ ಮುಂಬೈನಲ್ಲಿದ್ದರು.
View this post on Instagram
ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ 2020ರಲ್ಲಿ 17 ವಿಕೆಟ್ ಕಿತ್ತಿದ್ದರು. ದೆಹಲಿ ಕ್ಯಾಪ್ಟಿಲ್ ತಂಡದ ಜೊತೆಗಿನ ಪಂದ್ಯದಲ್ಲಿ ಕೇವಲ 20 ರನ್ ನೀಡಿ 5 ವಿಕೆಟ್ ಪಡೆದಿದ್ದರು. ಈ ಬಾರಿಯ ಸೀಸನ್ ನಲ್ಲಿ ಒಂದೇ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಏಕೈಕ ಆಟಗಾರರಾಗಿದ್ದಾರೆ. 201ರಲ್ಲಿ ಪಂಜಾಬ್ ಪರ ಆಡಿದ್ದ ವರುಣ್ ಅವರನ್ನ ಕೆಕೆಆರ್ ಈ ಬಾರಿ 4 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು.