ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮತ್ತು ಆರಂಭಿಕ ಬ್ಯಾಟ್ಸ್ ಮ್ಯಾನ್ ಶೇನ್ ವಾಟ್ಸನ್ ಅವರು ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.
ತಂಡದಲ್ಲಿ ಇಬ್ಬರು ಆಟಗಾರಿಗೆ ಮತ್ತು 11 ಮಂದಿ ಸಹಾಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಚೆನ್ನೈ ತಂಡ ಸ್ವಲ್ಪ ತಡವಾಗಿ ಅಭ್ಯಾಸವನ್ನು ಆರಂಭ ಮಾಡಿತ್ತು. ಸದ್ಯ ನಿರಂತರ ಅಭ್ಯಾಸದಲ್ಲಿ ನಿರತವಾಗಿರುವ ಧೋನಿ ನೇತೃತ್ವದ ಸಿಎಸ್‍ಕೆ ತಂಡ, ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಮಾರ್ಗದರ್ಶನದಲ್ಲಿ ಯುಇಎಯ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದೆ.
Advertisement
Advertisement
ಭಾನುವಾರದ ಅಭ್ಯಾಸದ ವೇಳೆ 39 ವರ್ಷದ ಶೇನ್ ವಾಟ್ಸನ್ ಮತ್ತು ಎಂಎಸ್ ಧೋನಿ ನೆಟ್ಸ್ ಪ್ರಾಕ್ಟೀಸ್‍ನಲ್ಲಿ ಬೌಲರ್ ಗಳನ್ನು ದಂಡಿಸುತ್ತಿರುವುದು ಕಂಡು ಬಂದಿದೆ. ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಶೇನ್ ವಾಟ್ಸನ್, 39ರ ವಯಸ್ಸಿನಲ್ಲೂ, ಈ ಇಬ್ಬರು ಹಳೆಯ ವ್ಯಕ್ತಿಗಳು ಮಾಡುತ್ತಿರುವ ಅಭ್ಯಾಸವು ಇಷ್ಟವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಓದಿ: ಕೊಹ್ಲಿ ದಾಖಲೆ, ಆಸೀಸ್ ಆಟಗಾರರ ಮೇಲುಗೈ – ಐಪಿಎಲ್ ಆರೆಂಜ್ ಕ್ಯಾಪ್ ಲಿಸ್ಟ್ ಇಲ್ಲಿದೆ
Advertisement
At the ripe old age of 39 …. just two old guys doing what we love @ChennaiIPL ???????????????? pic.twitter.com/GM8AQlDgS6
— Shane Watson (@ShaneRWatson33) September 13, 2020
Advertisement
ಐಪಿಎಲ್‍ನಲ್ಲಿ ಹೆಚ್ಚು ಬಾರಿ ರಾಜಸ್ಥಾನ್ ರಾಯಲ್ಸ್ ತಂಡಕ್ಕಾಗಿ ಆಡಿದ್ದ ವಾಟ್ಸನ್ ಕಳೆದ ಎರಡು ಆವೃತ್ತಿಯಿಂದ ಚೆನ್ನೈ ತಂಡದಲ್ಲಿ ಆಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ನನಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲೇ ಉಳಿಯಬೇಕು ಮತ್ತು ಶೇನ್ ವಾರ್ನ್ ಅವರ ಮಾರ್ಗದರ್ಶನದಲ್ಲಿ ಆಡಬೇಕು ಎಂದು ಇಷ್ಟವಿತ್ತು. ಆದರೆ ಅದೂ ಆಗಲಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ನಂತಹ ದೊಡ್ಡ ತಂಡಕ್ಕಾಗಿ ಆಡುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಚೆನ್ನೈ ತಂಡ ನನ್ನ ಮೇಲೆ ಬಹಳ ನಂಬಿಕೆಯನ್ನು ಇಟ್ಟಿದೆ. ಚೆನ್ನೈ ಒಂದು ಒಳ್ಳೆಯ ತಂಡ. ನಾನು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಇದ್ದಾಗ ಚೆನ್ನೈ ವಿರುದ್ಧ ಆಡುವ ಪಂದ್ಯದಲ್ಲಿ ಎಂಎಸ್ ಧೋನಿ ಮತ್ತು ಸ್ಟೀಫನ್ ಫ್ಲೆಮಿಂಗ್ ಅವರನ್ನು ಮೆಚ್ಚಿಕೊಂಡಿದ್ದೆ. ಅವರು ಪಂದ್ಯದಲ್ಲಿ ಮತ್ತು ಪಂದ್ಯದಿಂದ ಹೊರಗೂ ತಮ್ಮ ತಂಡದ ಆಟಗಾರರನ್ನು ನಡೆಸಿಕೊಳ್ಳುವ ರೀತಿಯನ್ನು ನಾನು ಮೆಚ್ಚಿಕೊಂಡಿದ್ದೆ ಎಂದು ವಾಟ್ಸನ್ ತಿಳಿಸಿದ್ದಾರೆ. ಇದನ್ನು ಓದಿ: ಅನುಭವ ಮಾರ್ಕೆಟಿನಲ್ಲಿ ಸಿಗಲ್ಲ – ಧೋನಿಯನ್ನು ಹಾಡಿಹೊಗಳಿದ ಆಕಾಶ್ ಚೋಪ್ರಾ
ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿದ್ದ ಐಪಿಎಲ್ ಯುಎಇಯಲ್ಲಿ ರಂಗೇರಲು ಸಿದ್ಧವಾಗಿದೆ. ಇದೇ ಸೆಪ್ಟಂಬರ್ 19ರಿಂದ ಐಪಿಎಲ್ ಹಂಗಾಮ ಶುರುವಾಗಲಿದೆ. ಆರಂಭಿಕ ಪಂದ್ಯದಲ್ಲಿ ಕಳೆದ ಆವೃತ್ತಿಯಲ್ಲಿ ಫೈನಲ್ ಆಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಮುಂಬೈ ಇಂಡಿಯನ್ಸ್ ತಂಡ ಕಣಕ್ಕೀಳಿಯಲಿವೆ. ಒಟ್ಟು 46 ದಿನ 56 ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ.