ಚಿಕ್ಕಬಳ್ಳಾಪುರ: ಇಷ್ಟು ವಯಸ್ಸಾದ್ರೂ ಭಗವಾನ್ ತಮ್ಮ ಭಾವನೆಗಳನ್ನ ಬದಲಾಯಿಸಿಕೊಂಡಿಲ್ಲ. ಬುದ್ದಿಜೀವಿಗಳ ಹೆಸರಿಗೆ ಭಗವಾನ್ ಅಪಮಾನ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶುರೇಶ್ ಕುಮಾರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕನಹಳ್ಳಿಯಲ್ಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಹಿತಿ ಭಗವಾನ್ ಅವರು ಹಿಂದೂ ಧರ್ಮ ಮತ್ತು ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು, ನ್ಯಾಯವಾದಿಯಾದವರು ನ್ಯಾಯಾಲಯದ ಆವರಣದಲ್ಲಿ ಈ ರೀತಿ ಮಾಡುವುದು ಸರಿ ಅಲ್ಲ, ಇದ್ರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ಕೇಸ್ ದಾಖಲಿಸುವ ಮೂಲಕ ನ್ಯಾಯಾಲಯದಲ್ಲಿ ಹೋರಾಟ ಮಾಡಲಿ ಅಂತ ಹೇಳಿದ್ದರು. ಆದರೆ ನಾನು ಭಗವಾನ್ ರನ್ನ ಸಮರ್ಥನೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಭಗವಾನ್ ಸಾಮಾನ್ಯ ಜನರ ಭಾವನೆಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗೆ ಅವರ ತಂದೆ ತಾಯಿ ಪಾಪ ಭಗವಾನ್ ಅಂತ ಹೆಸರಿಟ್ಟಿದ್ದಾರೆ. ಇಷ್ಟು ವಯಸ್ಸಾದ್ರೂ ಭಗವಾನ್ ತಮ್ಮ ಭಾವನೆಗಳನ್ನು ಬದಲಾಯಿಸಿಕೊಂಡಿಲ್ಲ. ಬುದ್ದಿಜೀವಿಗಳ ಹೆಸರಿಗೆ ಭಗವಾನ್ ಅಪಮಾನ ಎಂದರು.
Advertisement