– ಶಿಕ್ಷಕನ ವಿಶೇಷ ಮದುವೆ ಫೋಟೋ ವೈರಲ್
ಅಹಮದಾಬಾದ್: ಗುಜರಾತಿನ ಜುನಾಗಢ ನಗರ ವಿಶೇಷ ಮದುವೆಗೆ ಸಾಕ್ಷಿಯಾಗಿತ್ತು. ಮದುವೆಗೆ ಆಗಮಿಸಿದ ಅತಿಥಿಗಳು ನವಜೋಡಿಗೆ ಶುಭ ಹಾರೈಸಿ ಸಂತೋಷದಿಂದ ಫೋಟೋ ಕ್ಲಿಕ್ಕಿಸಿಕೊಂಡರು.
- Advertisement 2
29 ವಯಸ್ಸಿನ 5.5 ಅಡಿ ಎತ್ತರದ ಅಂಧ ಯುವತಿ, ತನಗಿಂತ 13 ವರ್ಷದ ದೊಡ್ಡವನಾಗಿರುವ ಮೂರು ಅಡಿ ಎತ್ತರದ ಶಿಕ್ಷಕರೊಬ್ಬರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಶಾಂತಾ ಮತ್ತು ರಮೇಶ್ ಸತಿ-ಪತಿಗಳಾಗಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
- Advertisement 3
- Advertisement 4
ಬಿ.ಎಡ್ ಪದವಿಧರೆಯಾಗಿರುವ 29 ವರ್ಷದ ಶಾಂತಾ ಹುಟ್ಟು ಅಂಧೆಯಾಗಿದ್ದು, ಸೇವಾ ಯುವಕ ಮಂಡಳಿಯ ಯುವತಿಯರ ಹಾಸ್ಟೆಲ್ ನಲ್ಲಿದ್ದರು. ಸರ್ಕಾರಿ ಶಾಲೆಯ ಶಿಕ್ಷಕರಾಗಿರುವ ರಮೇಶ್ ಜೊತೆ ಮದುವೆ ಆಗಿದ್ದಾರೆ.
ಹೆಲಿಕಾಪ್ಟರ್ ಮೂಲಕ ಗ್ರ್ಯಾಂಡ್ ಎಂಟ್ರಿ – ವಿಶೇಷ ಮದ್ವೆಗೆ ಸಾಕ್ಷಿಯಾದ ಬೆಂಗ್ಳೂರು https://t.co/y5L9xqi3Fe#Bengaluru #Groom #Helicopter #Marriage #KannadaNews
— PublicTV (@publictvnews) December 1, 2020