ಪಾಟ್ನಾ: ಬಿಹಾರದಲ್ಲಿ ಮಳೆ ಬಂದ್ರೆ ಪ್ರವಾಹ ಬರೋದು ಸಾಮಾನ್ಯ. ಹಾಗಾಗಿಯೇ ಪ್ರವಾಹ ಸಮಯದಲ್ಲಿ ಅಲ್ಲಿಯ ದೋಣಿ, ತೆಪ್ಪಗಳನ್ನು ಬಳಸಿಕೊಳ್ಳುತ್ತಾರೆ. ಆದ್ರೂ ದೋಣಿ ಏರಬೇಕಾದ್ರೆ ಕೆಲ ನದಿಯಲ್ಲಿ ನಡೆಯಬೇಕು. ಊರಿಗೆ ಬಂದ ವಧುವನ್ನ ಪತಿಯೇ ಹೆಗಲ ಮೇಲೆ ಹೊತ್ತಿಕೊಂಡು ದೋಣಿವರೆಗು ಕರೆದುಕೊಂಡು ಹೋಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಶನಿವಾರ ಪ್ರಖಂಡ ಕ್ಷೇತ್ರದ ಲೋಹಾಗಢಾ ಗ್ರಾಮಸ್ಥರು ಮದುವೆಗಾಗಿ ಪಕ್ಕದೂರಿಗೆ ತೆರಳಿದ್ದರು. ಭಾನುವಾರ ವಧು ಜೊತೆ ಎಲ್ಲರೂ ಗ್ರಾಮಕ್ಕೆ ಆಗಮಿಸಿದಾಗ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿತ್ತು. ಎಲ್ಲರೂ ಕೊಂಚ ದೂರ ನದಿಯಲ್ಲಿ ನಡೆದುಕೊಂಡು ದೋಣಿ ಏರಿದ್ದಾರೆ.
ನವ ವಧುವನ್ನ ಪತಿಯೇ ಹೆಗಲ ಮೇಲೆ ಹೊತ್ತೊಕೊಂಡು ತೆಪ್ಪದವರೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ವಧುವನ್ನ ಈ ಬದಿಯಲ್ಲಿಯೂ ದಡದವರೆಗೂ ಕರೆ ತಂದಿದ್ದಾನೆ. ಸ್ಥಳೀಯರು ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನೂ ಓದಿ: ಗಟ್ಟಿಮೇಳದ ವೇಳೆ ತಾಳಿ ನಾಪತ್ತೆ – ತಾಳಿ ಇಲ್ಲದೆ ವಧು ವರರು ಗಲಿಬಿಲಿ
ಈ ಗ್ರಾಮ ನೇಪಾಳದ ಗಡಿ ಭಾಗದಲ್ಲಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ. ಗ್ರಾಮಸ್ಥರು ಸೇತುವೆ ನಿರ್ಮಿಸುವಂತೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ. ಇದನ್ನೂ ಓದಿ: ವಿಡಿಯೋ: ಮದ್ವೆ ಮಂಟಪದಲ್ಲಿ ಅಲ್ಲಾಡ್ಸ್ ಅಲ್ಲಾಡ್ಸ್ ಹಾಡಿಗೆ ಕುಣಿದ ವಧು ವರರು- ಕಣ್ಣುದಾನ ಮಾಡಿ ಆದರ್ಶ ಮೆರೆದ ನವದಂಪತಿ
ಮಾಸ್ಕ್ ಧರಿಸಿ ಕೋಲುಗಳಿಂದ ಹಾರ ಬದಲಿಸಿಕೊಂಡ ವಧು-ವರ https://t.co/i0Tc2fOKVr#Groom #Bride #Marriage #CoronaVirus #COVID19 #KannadaNews
— PublicTV (@publictvnews) May 2, 2021