ತಿರುವನಂತಪುರಂ: ಲ್ಯಾಂಡಿಂಗ್ ವೇಳೆ ಅವಘಡ ಸಂಭವಿಸಿದ್ದು, 191 ಜನ ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಇಬ್ಭಾಗವಾಗಿದೆ.
Advertisement
ಕೇರಳದ ಕೋಯಿಕ್ಕೋಡ್ ನ ಕರಿಪುರ ವಿಮಾನ ನಿಲ್ದಾಣದಲ್ಲಿ ಘಟನೆ ಸಂಭವಿಸಿದ್ದು, ಲ್ಯಾಂಡ್ ಆಗುವ ವೇಳೆ ಅವಘಡ ಸಂಭವಿಸಿದೆ. ವಿಮಾನದಲ್ಲಿ ಒಟ್ಟು 191 ಜನ ಪ್ರಯಾಣಿಕರು ಇದ್ದರು. ಇದರಲ್ಲಿ 20 ಜನ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.
Advertisement
#UPDATE The Air India flight (IX-1344) from Dubai carrying 174 passengers skidded during landing at Karipur Airport in Kozhikode (Kerala) today. There were 6 crew members onboard, including two pilots: Air India Express https://t.co/iiWhSrHGOO
— ANI (@ANI) August 7, 2020
Advertisement
ಲ್ಯಾಂಡ್ ಆಗುವ ವೇಳೆ ವಿಮಾನ ರನ್ ವೇಗೆ ಅಪ್ಪಳಿಸಿದೆ. ವಿಮಾನ ತುಂಡು ತುಂಡಾಗಿದ್ದು, ಹಲವು ಭಾಗಗಳಾಗಿದೆ. ಸಂಜೆ 7.40ರ ಹೊತ್ತಿಗೆ ಘಟನೆ ಸಂಭವಿಸಿದ್ದು, ಭಾರೀ ಮಳೆ ಬರುತ್ತಿರುವಾಗಲೇ ಈ ಅವಘಡ ಸಂಭವಿಸಿದೆ.
Advertisement
#WATCH Kerala: Dubai-Kozhikode Air India flight (IX-1344) with 190 people onboard skidded during landing at Karipur Airport today. (Video source: Karipur Airport official) pic.twitter.com/aX90CYve90
— ANI (@ANI) August 7, 2020
ಏನಿದು ಟೇಬಲ್ ಟಾಪ್ ವಿಮಾನ ನಿಲ್ದಾಣ?
ಸುತ್ತಲೂ ಆಳ ಕಣಿವೆಯಿಂದ ಕೂಡಿ, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗಿದೆ. ಮಂಗಳೂರು ಹೊರತು ಪಡಿಸಿ ದೇಶದಲ್ಲಿ ಕೋಯಿಕ್ಕೋಡ್ ಮತ್ತು ಲೆಂಗ್‍ಪುಯಿನಲ್ಲಿ ಈ ರೀತಿಯ ವಿಮಾನ ನಿಲ್ದಾಣಗಳನ್ನು ಕಾಣಬಹುದು.