ಬೆಂಗಳೂರು: ಮಹಿಳಾ ಕಂಡಕ್ಟರ್ ಗಳಿಗೆ ಸ್ವರಕ್ಷಣಾ ತರಬೇತಿ ನೀಡಲು ಬಿಎಂಟಿಸಿ ಮುಂದಾಗಿದೆ. ಇನ್ನು ಮುಂದೆ ಮಾರ್ಷಲ್ ಆರ್ಟ್ಸ್, ಕರಾಟೆಯನ್ನು ಲೇಡಿ ಕಂಡಕ್ಟರ್ ಗಳು ಕಲಿಯಲಿದ್ದಾರೆ.
ಬಿಎಂಟಿಸಿ ಲೇಡಿ ಕಂಡಕ್ಟರ್ ತಂಟೆಗೆ ಬರೋ ಮುನ್ನ ಹುಷಾರ್ ಆಗಿರಬೇಕು. ಬಸ್‍ಗಳಲ್ಲಿ ಬೇಕಾ ಬಿಟ್ಟಿಯಾಗಿ ವರ್ತಿಸುವ ಮುನ್ನ ಎಚ್ಚರಿಕೆ ವಹಿಸುವುದು ಒಳ್ಳೆಯದು. ಯಾಕೆಂದರೆ ಮಾರ್ಷಲ್ ಆರ್ಟ್ಸ್, ಕರಾಟೆ, ಸಮರ ಕಲೆಗಳಲ್ಲಿ ಬಿಎಂಟಿಸಿಯ ಲೇಡಿ ಕಂಡಕ್ಟರ್ ಎಕ್ಸ್ ಪರ್ಟ್ಸ್ ಆಗಲಿದ್ದಾರೆ.
ಮಹಿಳಾ ಕಂಡಕ್ಟರ್ ಗಳಿಗೆ ಸ್ವರಕ್ಷಣೆ ತರಬೇತಿ ನೀಡಲು ಮುಂದಾಗಿದೆ. ಕೆಲಸದ ವೇಳೆ ಹಾಗೂ ಕಚೇರಿಗಳಲ್ಲಿ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳ ಬಗ್ಗೆ ಆಗಾಗ ದೂರು ದಾಖಲಾಗುತ್ತಿತ್ತು. ಮಹಿಳೆಯರ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳವ ತರಬೇತಿ ನೀಡಲು ಬಿಎಂಟಿಸಿ ಮುಂದಾಗುತ್ತಿದೆ.
ಮಹಿಳಾ ಕಂಡಕ್ಟರ್ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ಡಿಫೆನ್ಸ್ ಟ್ರೈನಿಂಗ್ ಕರಾಟೆ, ಜೂಡೋ, ಸಮರ ಕಲೆ, ಸ್ವಯಂ ದೃಢೀಕರಣ, ಕಾನೂನು ಜ್ಞಾನ, ಸಾರ್ವಜನಿಕ ಭಾಷಣದ ಬಗ್ಗೆ ತರಬೇತಿಯನ್ನು ನೀಡಲು ಬಿಎಂಟಿಸಿ ಮುಂದಾಗಿದೆ. 21 ದಿನಗಳ ಕೋರ್ಸ್ ಇದಾಗಿದ್ದು, 42 ಗಂಟೆಗಳ ತರಬೇತಿ ಹಾಗೂ 120 ನಿಮಿಷಗಳ ಸೆಷನ್ ನಡೆಸಲಾಗುತ್ತದೆ.