– ಪುದುಚೇರಿ ಜನರ ಗೆಲುವು ಅಂದ್ರು ದಿನೇಶ್ ಗುಂಡೂರಾವ್
ಪುದುಚೇರಿ: ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ರಾಷ್ಟ್ರಪತಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕಿರಣ್ ಬೇಡಿ ತೆಲಂಗಾಣದ ಲೆಫ್ಟಿನೆಂಟ್ ಗವರ್ನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಈ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ರಾಷ್ಟ್ರಪತಿ ಭವನದಿಂದ ಈ ಬಗ್ಗೆ ಅಧಿಕೃತ ಆದೇಶ ಪ್ರಕಟಗೊಂಡಿದ್ದು, ಹೊಸ ರಾಜ್ಯಪಾಲರ ನೇಮಕವಾಗುವವರೆಗೂ ತೆಲಂಗಾಣದ ರಾಜ್ಯಪಾಲರಾದ ತಮಿಳುಸಾಯಿ ಸೌಂದರರಾಜನ್ ಅವರಿಗೆ ಪುದುಚೆರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.
Dr. Kiran Bedi removed as the Lieutenant Governor of Puducherry
Dr. Tamilisai Soundararajan, Governor of Telangana, given additional charge as Lieutenant Governor of Puducherry pic.twitter.com/pSOoIgcCJK
— ANI (@ANI) February 16, 2021
ಪುದುಚೇರಿಯ ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇದ್ದಾಗ ಕೇಂದ್ರ ಸರ್ಕಾರ ರಾಜ್ಯಪಾಲರ ಬದಲಾವಣೆ ಮಾಡಿರುವುದು ಕುತೂಹಲ ಮೂಡಿಸಿದೆ. ಪುದುಚೆರಿಯ ಅಭಿವೃದ್ಧಿಗೆ ಕೇಂದ್ರದ ಸೂಚನೆಯಂತೆ ಕಿರಣ್ ಬೇಡಿ ಅಡ್ಡಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಈ ಹಿಂದೆ ಆರೋಪ ಮಾಡಿತ್ತು.
ಇದೀಗ ಏಕಾಏಕಿ ಪುದುಚೇರಿಯ ರಾಜ್ಯಪಾಲರ ಹುದ್ದೆಯಿಂದ ವಜಾಮಾಡಲಾಗಿದ್ದು, ಕಿರಣ್ ಬೇಡಿ ಅವರನ್ನು ತಡೆಯಲಾಗಿದೆ. ಹೊಸ ರಾಜ್ಯಪಾಲರ ನೇಮಕವಾಗುವವರೆಗೆ ತೆಲಂಗಾಣದ ರಾಜ್ಯಪಾಲರಾದ ತಮಿಳುಸಾಯಿ ಸೌಂದರರಾಜನ್ ಅವರಿಗೆ ಪುದುಚೆರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ ಎಂದು ರಾಷ್ಟ್ರಪತಿ ಭವನದಿಂದ ಅಧಿಕೃತ ಹೇಳಿಕೆ ಪ್ರಕಟವಾಗಿದೆ.
ಕಳೆದ ತಿಂಗಳು ಪುದುಚೆರಿಯಲ್ಲಿ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿದ್ದ ಇಬ್ಬರು ಶಾಸಕರು ಕಿರಣ್ ಬೇಡಿ ಅವರನ್ನು ರಾಜ್ಯಪಾಲರ ಹುದ್ದೆಯಿಂದ ವಜಾಗೊಳಿಸಬೇಕೆಂದು ಬೇಡಿಕೆ ಇಟ್ಟಿದ್ದರಂತೆ. ಈ ಎಲ್ಲಾ ಹಾಗು- ಹೋಗುಗಳ ನಡುವೆ ಇದೀಗ ಕಿರಣ್ ಬೇಡಿ ಪದಚ್ಯುತಿ ಕೂತುಹಲ ಕೆರಳಿಸಿದೆ.
Shri V. Narayanasamy, Chief Minister of Puducherry, along with Ministers and MP from Puducherry, called on President Kovind at Rashtrapati Bhavan. pic.twitter.com/ihc4EzzHUe
— President of India (@rashtrapatibhvn) February 10, 2021
ಪುದುಚೇರಿ ಜನರಿಗೆ ಗೆಲುವು:
ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ವಜಾಗೊಳಿಸಿರುವುದು ಪುದುಚೇರಿ ಜನರ ಗೆಲುವು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ಭಾರತದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಲೆಫ್ಟಿನೆಂಟ್ ಜನರಲ್ ಆಗಿದ್ದಾರೆ. ಅವರು ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸಲು ಬಿಟ್ಟಿರಲಿಲ್ಲ. ಬಿಜೆಪಿ/ಆರ್‍ಎಸ್‍ಎಸ್ ಕಚೇರಿಯೇ ಕಿರಣ್ ಬೇಡಿ ಕಚೇರಿಯಾಗಿತ್ತು ಎಂದು ದಿನೇಶ್ ಬರೆದುಕೊಂಡಿದ್ದಾರೆ.