ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ಇದೇ ಸೆಪ್ಟೆಂಬರ್ 9ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ತಮಿಳು, ತೆಲಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.
Advertisement
ವಿಶೇಷವೆಂದರೆ ಸಿನಿಮಾ ತಯಾರಕರು ಲೈಗರ್ ಸಿನಿಮಾದ ಹೊಸ ಪೋಸ್ಟರ್‍ನನ್ನು ಬಿಡುಗಡೆಗೊಳಿಸುವ ಮೂಲಕ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ. ಈ ಪೋಸ್ಟರ್‍ನಲ್ಲಿ ವಿಜಯ್ ಕೈನಲ್ಲಿ ಕೋಲು ಹಿಡಿದು ಜೋರಾಗಿ ಕಿರುಚುತ್ತಿರುವುದನ್ನು ಕಾಣಬಹುದು.
Advertisement
Advertisement
ಸಿನಿಮಾ ಆಪ್‍ಡೇಟ್ಸ್ ಕುರಿತಂತೆ ವಿಜಯ್ ದೇವರಕೊಂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ಶೇರ್ ಮಾಡಿಕೊಂಡಿದ್ದು, ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 9ಕ್ಕೆ ನಾವು ಬರುತ್ತಿದ್ದೇವೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಲೈಗರ್ ಸಿನಿಮಾದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
Advertisement
The Date is set.
India – we are coming!
September 9, 2021. #LIGER#SaalaCrossbreed#PuriJagannadh @ananyapandayy @karanjohar @charmmeofficial @apoorvamehta18 @DharmaMovies @PuriConnects pic.twitter.com/pgclqQYiQ4
— Vijay Deverakonda (@TheDeverakonda) February 11, 2021
ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕರಣ್ ಜೋಹರ್, ಜಗತ್ತಿನಾದ್ಯಂತ ಪಂಚ್ ಪ್ಯಾಕ್ ನೀಡಲು ಸಿನಿಮಾ ಸಿದ್ಧವಾಗಿದೆ. ಲೈಗರ್ ಸೆಪ್ಟೆಂಬರ್ 9 ರಂದು ಜಗತ್ತಿನಾದ್ಯಂತ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ, ತೆಲಗು, ತಮಿಳ್, ಕನ್ನಡ ಮತ್ತು ಮಲೆಯಾಳಂ ಎಂದು ಕ್ಯಾಪ್ಷನ್ ಹಾಕಿಕೊಳ್ಳುವುದರ ಮೂಲಕ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://twitter.com/karanjohar/status/1359694753198088192
ಕೊರೊನಾ ಸಾಂಕ್ರಮಿಕ ರೋಗದಿಂದ ಮಾರ್ಚ್ 2020ರಲ್ಲಿ ಸ್ಥಗಿತಗೊಂಡಿದ್ದ ಲೈಗರ್ ಸಿನಿಮಾದ ಚಿತ್ರೀಕರಣ 11 ತಿಂಗಳ ಬಳಿಕ ಇಂದಿನಿಂದ ಮುಂಬೈನಲ್ಲಿ ಚಿತ್ರೀಕರಣ ಆರಂಭಗೊಂಡಿದೆ.
ನಿನ್ನೆ ಮುಂಬೈನಲ್ಲಿ ಅನನ್ಯಾ ಪಾಂಡೆ ಮತ್ತು ಅವರ ಕುಟುಂಬವನ್ನು ಪೂರಿಜಗನ್ನಾಥ್ ಹಾಗೂ ಚಾರ್ಮ್ ಎಂದು ಚಾರ್ಮ್ ಭೇಟಿಯಾಗಿದ್ದರು. ಈ ವೇಳೆ ಕ್ಲಿಕ್ಕಿಸಿದ ಕೆಲವು ಫೋಟೋವನ್ನು ಚಾರ್ಮಿ ಕೌರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Beautiful evening with gorgeous people at most beautiful home ????
Was Much required before we kick start our crazy schedule from tomorrow ????????
Thanks chunkypanday bhavanapandey @ananyapandayy for being super amazing host ❤️#LIGER ???????? pic.twitter.com/fMinpoEbUz
— Charmme Kaur (@Charmmeofficial) February 10, 2021
ಲೈಗರ್ ಸಿನಿಮಾದ ಲೀಡಿಂಗ್ ರೋಲ್‍ನಲ್ಲಿ ನಟ ವಿಜಯ್ ದೇವರಕೊಂಡ ಅಭಿನಯಿಸಿದ್ದು, ವಿಜಯ್ ಜೊತೆ ಅನನ್ಯಪಾಂಡೆ ಡ್ಯೂಯೆಟ್ ಹಾಡಲಿದ್ದಾರೆ. ಇನ್ನೂ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ರಮ್ಯಾ ಕೃಷ್ಣನ್, ರೋನಿತ್ ರಾಯ್, ಅಲಿ, ಮಕರಂದ್ ದೇಶಪಾಂಡೆ ಮತ್ತು ಗೆಟಪ್ ಶ್ರೀನು ಅಭಿನಯಿಸಿದ್ದಾರೆ. ಲೈಗರ್ ಸಿನಿಮಾ ಬಾಕ್ಸಿಂಗ್ ಕಥೆ ಆಧಾರಿತ ಸಿನಿಮಾವಾಗಿದ್ದು, ನಿರ್ದೇಶಕ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಪೂರಿ ಜಗನ್ನಾಥ್, ಚಾರ್ಮ್ ಕೌರ್, ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ.