ಬೆಂಗಳೂರು: ಕೊರೊನಾ, ಲಾಕ್‍ಡೌನ್‍ನಿಂದ ಬಹುತೇಕರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಕೆಲಸವಿಲ್ಲದ ಕೆಲ ನಿರುದ್ಯೋಗಿಗಳು ಜೀವನಕ್ಕಾಗಿ ಅಡ್ಡದಾರಿ ಹಿಡಿದುಬಿಟ್ಟಿದ್ದಾರೆ. ಅದೇ ರೀತಿ ಈ ಸಹೋದರರು ಸರಗಳ್ಳತನಕ್ಕೆ ಇಳಿದು ಜೈಲು ಪಾಲಾಗಿದ್ದಾರೆ.
Advertisement
ಜುಲೈ 6ರಂದು ವಿದ್ಯಾರಣ್ಯಪುರದ ಎಂಪಿಎ ಲೇಔಟಿನಲ್ಲಿ ಆರೋಪಿಗಳು ಸರಗಳ್ಳತನ ಮಾಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಮಾಕ್ಷಿಪಾಳ್ಯ ನಿವಾಸಿಗಳಾದ ಸುದೀಪ್ ಹಾಗೂ ರಜತ್ ಬಂಧಿತ ಆರೋಪಿಗಳು.
Advertisement
62 ವರ್ಷದ ವೃದ್ಧೆಯ ಸರಗಳ್ಳತನ ಮಾಡಿ, ಪರಾರಿಯಾಗಿದ್ದರು. ಆರೋಪಿಗಳ ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ಬಂಧನದಿಂದ 2 ಸರ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
Advertisement
Advertisement
ಈ ಇಬ್ಬರು ಕಳ್ಳರು ಸಹ ಸಹೋದರರು. ಲಾಕ್‍ಡೌನ್ ನಲ್ಲಿ ಕೆಲಸವಿಲ್ಲದೆ ಸರಗಳ್ಳತನಕ್ಕಿಳಿದಿದ್ದರು. ಪದವಿ ವ್ಯಾಸಂಗ ಮುಗಿಸಿದ್ದ ಸುದೀಪ್ ಹಾಗೂ ರಜತ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಲಾಕ್‍ಡೌನ್ ನಲ್ಲಿ ಕೆಲಸವಿಲ್ಲದೆ ಪರಿತಪಿಸಿದ್ದರು. ಕೆಲಸ ಸಿಗದ್ದರಿಂದ ಹಣಕ್ಕಾಗಿ ಸರಗಳ್ಳತನ ಮಾಡಲು ಮುಂದಾಗಿ ಜುಲೈ 6ರಂದು ವೃದ್ಧೆಯ ಸರಗಳ್ಳತನ ಮಾಡಿ ಇದೀಗ ಜೈಲು ಸೇರಿದ್ದಾರೆ.