ಬೆಳಗಾವಿ: ನಿಯಮ ಉಲ್ಲಂಘಣೆ ಮಾಡಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 6.675 ಟನ್ ಜಿಲೆಟಿನ್ ಕಡ್ಡಿ ಮತ್ತು ಡಿಟೋನೇಟರ್ ಗಳನ್ನು ಪೊಲೀಸರು ಪತ್ತೆ ಹಚ್ಚಿ ನಾಲ್ವರನ್ನು ವಶಕ್ಕೆ ಪಡೆದುಕೊಂಡ ಘಟನೆ ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದಲ್ಲಿ ವರದಿಯಾಗಿದೆ.
ಲಾರಿ ಮತ್ತು ಬೊಲೆರೊ ಪಿಕ್‍ಅಪ್ ವಾಹನದಲ್ಲಿ ನಿಯಮ ಉಲ್ಲಂಘಿಸಿ, ನಿರ್ಲಕ್ಷ್ಯತನದಿಂದ ಜಿಲೆಟಿನ್ ಕಡ್ಡಿ ಮತ್ತು ಡಿಟೋನೇಟರ್ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕಾಕತಿ ಠಾಣೆ ಪೊಲೀಸರು ದಾಳಿ ಮಾಡಿದ್ದರು. ಲಾರಿಯಲ್ಲಿ ತುಂಬಿದ್ದ ಅಂದಾಜು ನಾಲ್ಕು ಲಕ್ಷ ಮೌಲ್ಯದ ಸ್ಫೋಟಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
Advertisement
Advertisement
ತಾಲೂಕಿನ ಹೊನಗಾ ಗ್ರಾಮದ ದಾಬಾ ಬಳಿ ಲಾರಿ ಮತ್ತು ಬೊಲೆರೊ ಪಿಕ್‍ಅಪ್ ಬರುತ್ತಿದ್ದಂತೆ ತಪಾಸಣೆಗಿಳಿದ ಪೊಲೀಸರು ಜಿಲೆಟಿನ್ ಕಡ್ಡಿ ಮತ್ತು ಡಿಟೋನೇಟರ್ ಗಳ ಬಾಕ್ಸ್ ಗಳನ್ನು ನೋಡಿ ದಂಗಾಗಿದ್ದಾರೆ. ಈ ಎಲ್ಲಾ ಸ್ಫೋಟಕಗಳು ಕರೋಶಿ ಗ್ರಾಮದಿಂದ ಧಾರವಾಡ, ಗದಗ ಜಿಲ್ಲೆಗಳಿಗೆ ಸಾಗಿಸಲಾಗುತ್ತಿತ್ತು. ದಾಳಿ ವೇಳೆ ವಾಹನದಲ್ಲಿದ್ದ ಚಿಕ್ಕೋಡಿ ತಾಲೂಕಿನ ಬೊಬಲವಾಡ ಗ್ರಾಮದ ರಮೇಶ್ ಲಕ್ಕೊಟಿ, ರಾಜು ಶಿರಗಾವಿ, ಮುಗಳಿ ಗ್ರಾಮದ ಅರುಣ ಮಠದ, ವಿನಯ್ ಕಿನ್ನವರ್ ಅವರನ್ನು ಬಂಧಿಸಿ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement