ನೆಲಮಂಗಲ: ಕೋವಿಡ್ ಅಲೆಗಳಿಗೆ ತತ್ತರಿಸಿದ ಹಲವಾರು ನಗರ ಜನತೆ ಹಳ್ಳಿಯತ್ತ ಮುಖಮಾಡಿದ್ದಾರೆ. ಇದೇ ಹಾದಿಯಲ್ಲಿ ವಿದ್ಯಾವಂತ ಯುವಕರು ಸ್ವಯಂ ಕೃಷಿಯತ್ತ ಮನಸ್ಸು ಮಾಡಿ ಸಾಧನೆ ಮಾಡಿ ಸಾಧಕರಾಗಿದ್ದಾರೆ. ತುಮಕೂರಿನ ಕೈಗಾರಿಕಾ ವ್ಯವಹಾರ ಅಧ್ಯಯನದಲ್ಲಿ ಎಂಜಿನಿಯರ್ ಪದವಿ ಪಡೆದಿದ್ದ ಯುವಕೊರಬ್ಬರು ಮೀನು ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.
Advertisement
ವಿವೇಕ್ ಕುಮಾರ್ ನೆಲಮಂಗಲ ತಾಲೂಕಿನ ಮುದ್ದರಾಮನಾಯ್ಕನ ಪಾಳ್ಯದ ಬಳಿಯ, ಸೈನಿಕ ವಸತಿ ಸಮುಚ್ಚಯದ ಪಕ್ಕದಲ್ಲಿ ಜಮೀನು ಪಡೆದು ಮೂರು ದೊಡ್ಡ ತೊಟ್ಟಿಗಳಲ್ಲಿ ಮೀನಿನ ಕೃಷಿ ಮಾಡಿ, ವರ್ಷಕ್ಕೆ ಸರಾಸರಿ 12 ಟನ್ ಮೀನು ಮಾರಾಟ ಮಾಡಿ ಲಕ್ಷ, ಲಕ್ಷ ಆದಾಯ ಗಳಿಸುತ್ತಿದ್ದಾರೆ.
Advertisement
Advertisement
ಗಿಫ್ಟ್ ಥಿಲೋಪಿಯಾ ಮೀನು ವರದಾನವಾಗಿದ್ದು, ರಿಸರ್ಕಿಯೊಲೇಟಿಂಗ್ ಅಕ್ವಾ ಸಿಸ್ಟಂ ಎಂಬ ನೂತನ ತಂತ್ರಜ್ಞಾನ ಬಳಸಿ, ಮೂರು ತೊಟ್ಟಿಗಳಿಗೂ ಸ್ವಯಂ ಪೆಂಡಂಟಿಂಗ್ ಪಡೆದು, ಈ ಗಿಫ್ಟ್ ಥಿಲಿಪಿಯಾ ಎಂಬ ಮೀನನ್ನು ಮಾರುಕಟ್ಟೆಗೆ ನೀಡುತ್ತಿದ್ದಾರೆ. ಈ ಮೀನು ವಾಸ ಮಾಡುವ ನೀರಿನಲ್ಲಿ ಸುಮಾರು 14 ವಿವಿಧ ತ್ಯಾಜ್ಯಗಳನ್ನು ಬಿಡುವುದರಿಂದ, ಈ ನೀರಿನಲ್ಲಿ ಕೃಷಿ ಬೆಳೆಗಳನ್ನು ಬೆಳೆಯಲು ಸಾಕಷ್ಟು ಅನುಕೂಲಕರವಾಗಿದೆ. ಮುಂದಿನ ದಿನಗಳಲ್ಲಿ ಈ ಮೀನಿನ ಜೊತೆ ಸ್ವಯಂ ಕೃಷಿ ಸಹ ಮಾಡುತ್ತೇನೆ ಎಂದು ವಿವೇಕ್ ಕುಮಾರ್ ತಿಳಿಸಿದ್ದಾರೆ.
Advertisement
ಆರ್.ಎ.ಎಸ್.( ರಿಸರ್ಕಿಯೊಲೇಟಿಂಗ್ ಅಕ್ವಾ ಸಿಸ್ಟಂ) ಬಳಸಿಕೊಂಡ ನಂತರ ಉತ್ಪಾದನಾ ವೆಚ್ಚವನ್ನು 200-220 ರೂಪಾಯಿಯಿಂದ 80 ರಿಂದ 100 ರೂಪಾಯಿಗಳಿಗೆ ಇಳಿಸಿದ್ದೇವೆ. ಸ್ಥಳೀಯವಾಗಿ ಸಹ ಮೀನಿನ ಮಾರಾಟ ಮಾಡುತ್ತೇವೆ. ಜೊತೆಗೆ ಸಗಟು ಮಾರಾಟ ಮಾಡುತ್ತೇವೆ. ಜಿ.ಐ.ಎಫ್.ಟಿ. ಥಿಲಪಿಯಾ ತಳಿ: ಜನಟೀಕಲಿ-ಇಂಪರ್ ವುಡ- ಫಾಮಿರ್ಂಗ್- ಟೆಕ್ನಾಲಜಿ, ಗಿಫ್ಟ್ ಥಿಲಪಿಯಾ ಮೀನಿನ ವಿಸ್ತøತ ರೂಪವಾಗಿದ್ದು, ಪ್ರಾರಂಭದಲ್ಲೇ ಈ ಮೀನುಗಳು, ಹೊಸ ತಳಿ ಶಾಸ್ತ್ರ, ಹಾಗೂ ಒಂದು ವರ್ಷದ ಕಾಲ ಈ ಮೀನುಗಳು ಗಂಡು-ಹೆಣ್ಣು ಭೇದವಿಲ್ಲದೆ, ಬೆಳೆಯುವುದರಿಂದ ಅಧಿಕ ಇಳುವರಿ ಬರುತ್ತದೆ ಮತ್ತು ಹೊಸ ಅವಿಷ್ಕಾರ ಮುಂದಿನ ಹೊಸ ಯೋಜನೆಗಳಿಗೂ ದಾರಿ ಮಾಡಿಕೊಡುತ್ತದೆ ಎಂದಿದ್ದಾರೆ.
ಮೀನು ಮಾರಾಟ ಬಲು ಜೋರು: ಸ್ಥಳೀಯವಾಗಿ ವಾರದಲ್ಲಿ ಎರಡು ದಿನ ಮಾರಾಟ ಮಾಡುವ ಈ ಮೀನು ಕೆಜಿಗೆ 200 ರೂಪಾಯಿವರೆಗೆ ಮಾರಾಟವಾಗುತ್ತದೆ. ಇನ್ನೂ ಇದೇ ಜಾಗಕ್ಕೆ ಬಂದು ಸಗಟು ಮಾರಾಟಗಾರರು ಟನ್ ಗಟ್ಟಲೆ ಮೀನು ಖರೀದಿಸುವವರಿಗೆ 150 ರೂಪಾಯಿ ಕೆಜಿಗೆ ನೀಡುತ್ತೇವೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಯಪ್ರವೃತ್ತರಾಗಿ ಹೊಸ ಮಾರಾಟದ ಆಪ್ ಸಿದ್ದಪಡಿಸುತ್ತಿದ್ದು, ಜೀವಂತ ಮೀನುಗಳನ್ನು ತುಮಕೂರಿಗೆ ಮಂಜುಗಡ್ಡೆ ಮುಖಾಂತರ ಸಾಗಿಸಿ ಮಾರಾಟ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಧಾರಕಾರ ಮಳೆ – ಧುಮ್ಮುಕ್ಕಿ ಹರಿಯುತ್ತಿದೆ ಜಲಧಾರೆಗಳು