ನವದೆಹಲಿ: ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲೂ ಸರ್ಕಾರಿ ಸೇರಿದಂತೆ ಸಾರಿಗೆ ನೌಕರರ ಹಿತ ಕಾಯುವ ಕೆಲಸವನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಸರ್ಕಾರಕ್ಕೆ ಒಂದು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಸುದ್ದಿಗೋಷ್ಢಿ ನಡೆಸಿ ಮಾತನಾಡಿದ ಅವರು, ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆರಂಭದಲ್ಲಿ ಅತಿವೃಷ್ಠಿ-ಅನಾವೃಷ್ಠಿ ಕಾಡಿದ್ದು, ರಾಜ್ಯದ 20 ಜಿಲ್ಲೆಗಳು ಸಂಕಷ್ಟದಲ್ಲಿದ್ದವು. ಅದೆಲ್ಲ ಸಮಸ್ಯೆ ನಿಭಾಯಿಸುವ ಹೊತ್ತಿಗೆ ಕೊರೊನಾ ಸಂಕಷ್ಟದಲ್ಲಿ ಸಿಲುಕಿದ್ದೇವೆ ಎಂದರು.
Advertisement
Advertisement
ಲಾಕ್‍ಡೌನ್ ಸಂದರ್ಭದಲ್ಲೂ ಎಲ್ಲ ವಲಯಗಳ ನೆರವಿಗೆ ಸರ್ಕಾರ ಬಂದಿದೆ. ಆಟೋ ಚಾಲಕರು, ಕ್ಷೌರಿಕರು, ರೈತರು ಸೇರಿದಂತೆ ಹಲವರಿಗೆ ಸರ್ಕಾರ ಸಹಾಯಹಸ್ತ ಚಾಚಿದೆ ವಿಶೇಷವಾಗಿ ಆರ್ಥಿಕ ಸಂಕಷ್ಟದ ನಡುವೆಯೂ ಸರ್ಕಾರ ನೌಕರರ ಹಿತ ಕಾದಿದ್ದೇವೆ ಎಂದರು.
Advertisement
ಸಾರಿಗೆ ಇಲಾಖೆಯಲ್ಲಿ 1.30 ಲಕ್ಷ ನೌಕರರಿದ್ದು, ಪ್ರತಿ ತಿಂಗಳು 326 ಕೋಟಿ ನೌಕರರ ಸಂಬಂಳಕ್ಕೆ ಬೇಕು. ಲಾಕ್‍ಡೌನ್ ನಿಂದ ಸಂಪೂರ್ಣ ಆದಾಯ ನಿಂತು ಹೋಗಿತ್ತು. ಮೊದಲ ಎರಡು ತಿಂಗಳು ಸರ್ಕಾರವೇ ಪೂರ್ಣ ಸಂಬಂಳ ನೀಡಿದೆ. ಈಗ ಸಾರಿಗೆ ವ್ಯವಸ್ಥೆ ಆರಂಭವಾದರೂ ಪ್ರಯಾಣಿಕರು ಇಲ್ಲ ಹೀಗಾಗೀ ಶೇ.75 ಸಂಬಳವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ 960 ಕೋಟಿ ಹಣವನ್ನು ಸರ್ಕಾರ ನೀಡಿದೆ ಎಂದು ವಿವರಿಸಿದರು.
Advertisement
ಬೇರೆ ರಾಜ್ಯಗಳಲ್ಲಿ ಸರ್ಕಾರಿ ನೌಕರರ ಶೇ.25 ಸಂಬಂಳ ಕಡಿತ ಮಾಡಿದೆ ಆದರೆ ಬಿಎಸ್‍ವೈ ಸರ್ಕಾರ ಯಾವುದೇ ಸಿಬ್ಬಂದಿ ವೇತನ ಕಡಿತ ಮಾಡಿಲ್ಲ ಆದಾಯ ಕೊರತೆ ಇದ್ದರು ನೌಕರರ ಹಿತವನ್ನು ಸರ್ಕಾರ ಕಾಪಾಡಿದೆ ಎಂದರು.
ಸಾರಿಗೆ ಇಲಾಖೆ ನಷ್ಟದಲ್ಲಿದೆ. ಬಿಎಂಟಿಸಿ ಲಾಕ್‍ಡೌನ್ ಮುಂಚೆಯೇ ಪ್ರತಿ ದಿನ 1.17 ಕೋಟಿ ನಷ್ಟದಲ್ಲಿತ್ತು. ಈಗ ಇದು ಇನ್ನೂ ಹೆಚ್ಚಾಗಿದೆ. ಟಿಕೆಟ್ ದರಗಳನ್ನು ಹೆಚ್ಚಿಸದ ಹಿನ್ನೆಲೆ ನಷ್ಟದಲ್ಲಿತ್ತು. ಶೇ.12ರಷ್ಟು ಟಿಕೆಟ್ ದರ ಏರಿಸಿ ಸಂಸ್ಥೆ ನಷ್ಟ ತಪ್ಪಿಸಿದೆ. ಇಲಾಖೆಯಲ್ಲಿ ಸಾಕಷ್ಟು ಅವ್ಯವಾಹರಗಳು ನಡೆದ ಹಿನ್ನೆಲೆ ನಷ್ಟ ಅನುಭವಿಸುತ್ತಿದ್ದೇವೆ. ಈ ನಷ್ಟವನ್ನು ತಡೆಯಲು ಇಸ್ರೋ ಜೊತೆಗೆ ಸೋರಿಕೆ ತಡೆಯುವ ಪ್ರಯತ್ನ ಮಾಡಿದೆ ಎಂದು ತಿಳಿಸಿದರು.
ಇಂಧನ ಉಳಿತಾಯ ಮಾಡುವ ಚಾಲಕರಿಗೆ 10 ಗ್ರಾಂ ಚಿನ್ನದ ಮೆಡಲ್ ನೀಡುವ ವ್ಯವಸ್ಥೆ ಮಾಡಿದೆ. ಟೈಯರ್ ಗಳನ್ನು ಬಾಡಿಗೆ ತೆಗೆದುಕೊಳ್ಳಲು ಮುಂದಾಗಿದ್ದೇವೆ. ರಾಜ್ಯದ ಎಲ್ಲ ಸರ್ಕಾರಿ ಖಾಸಗಿ ಸಾರ್ವಜನಿಕ ವಾಹನಗಳಿಗೆ ಜಿಪಿಎಸ್ ಅಳವಡಿಸುವ ವ್ಯವಸ್ಥೆ ಮಾಡುತ್ತಿದೆ. ನಿರ್ಭಯ ಯೋಜನೆ 40 ಕೋಟಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಬಸ್ ಒಳಗೆ ಸಿಸಿಟಿವಿ ಸೇರಿದಂತೆ ಮಹಿಳೆ ಸುರಕ್ಷತೆ ಹಾಗೂ ಇಸ್ರೋದಾ ನಾವಿಕಾ ಜಿಪಿಎಸ್ ವ್ಯವಸ್ಥೆ ಅಳವಡಿಸಲು ಚಿಂತಿಸಿದ್ದೇವೆ. ಇದಲ್ಲದೇ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.