ಹಾವೇರಿ: ಕೊರೊನಾ ಹಿನ್ನೆಲೆ ಲಾಕ್‍ಡೌನ್ ಜಾರಿಯಲ್ಲಿದ್ದ ವೇಳೆಯಲ್ಲಿ ಜಿಲ್ಲೆಯಲ್ಲಿ ಯುವತಿಯರೇ ಹೆಚ್ಚು ನಾಪತ್ತೆಯಾದ ಪ್ರಕರಣಗಳು ದಾಖಲಾಗಿವೆ. ಒಟ್ಟು 19 ಪೊಲೀಸ್ ಠಾಣೆಗಳಲ್ಲಿ 48 ಪ್ರಕರಣಗಳು ದಾಖಲಾಗಿವೆ. 8 ಜನರು ಪುರುಷರು ನಾಪತ್ತೆಯಾಗಿದ್ದು, 40 ಜನ ಮಹಿಳೆಯರು, ಯುವತಿಯರು ನಾಪತ್ತೆಯಾದ ಪ್ರಕರಣಗಳು ಠಾಣೆಗಳಲ್ಲಿ ದಾಖಲಾಗಿವೆ.
Advertisement
ಲಾಕ್‍ಡೌನ್ ವೇಳೆ ಒಟ್ಟು 40 ಮಹಿಳೆಯರ ನಾಪತ್ತೆ ಪ್ರಕರಣಗಳಲ್ಲಿ ಯುವತಿಯರೇ ಹೆಚ್ಚು ಕಾಣೆಯಾದ ಪ್ರಕರಣಗಳು ವರದಿಯಾಗಿವೆ ಎಂದು ಹಾವೇರಿ ಎಸ್ಪಿ ಕೆ.ಜೆ.ದೇವರಾಜ್ ಹೇಳಿದ್ದಾರೆ. ಯುವತಿಯರು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ, ಸ್ವಸಹಾಯ ಸಂಘಕ್ಕೆ ಹಣ ಕಟ್ಟಿ ಬರುತ್ತೇನೆ, ಬಟ್ಟೆ ತೊಳೆಯಲು ಹೋಗುತ್ತೇನೆ, ಗೆಳೆತಿಯ ಮನೆಗೆ ಹೋಗಿ ಬರುತ್ತೇನೆ. ಬ್ಲೌಸ್ ಹೊಲಿಸಿಕೊಂಡು ಬರುತ್ತೇನೆ ಹಾಗೂ ಮನೆಯಲ್ಲಿ ಯಾರು ಇಲ್ಲದ ವೇಳೆ ಯುವತಿಯರು ನಾಪತ್ತೆಯಾದ ಪ್ರಕರಣ ದಾಖಲಾಗಿವೆ.
Advertisement
Advertisement
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಯುವತಿಯರ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪ್ರೀತಿ, ಪ್ರೇಮಕ್ಕೆ ಸಂಬಂಧಿಸಿದಂತೆ ಹೆಚ್ಚು ನಾಪತ್ತೆಯಾಗಿವೆ. ಈಗಾಗಲೇ 48 ಪ್ರಕರಣಗಳಲ್ಲಿ 10 ಕೇಸ್ ಗಳು ಪತ್ತೆಯಾಗಿದ್ದು, ಇಬ್ಬರು ಪುರುಷರು ಹಾಗೂ 8 ಜನ ಯುವತಿಯರನ್ನು ಪತ್ತೆ ಮಾಡಿದ್ದೇವೆ. ಪತ್ತೆಯಾದ ನಂತರ ಪ್ರೀತಿ, ಪ್ರೇಮದ ಕಾರಣಕ್ಕಾಗಿ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಕೊರೊನಾ ಇರೋ ಕಾರಣಕ್ಕಾಗಿ ಹೆಚ್ಚು ಕೇಸ್ ಪತ್ತೆ ಮಾಡಲು ಆಗಿಲ್ಲ ಎಂದು ದೇವರಾಜ್ ತಿಳಿಸಿದ್ದಾರೆ.
Advertisement
ಉಳಿದ 38 ನಾಪತ್ತೆ ಪ್ರಕರಣಗಳನ್ನ ಶೀಘ್ರದಲ್ಲೇ ತಂಡ ರಚಿಸಿ ಪತ್ತೆ ಮಾಡುವ ಕಾರ್ಯ ಮಾಡುತ್ತೇವೆ. ಕೊರೊನಾ ಎರಡನೇ ಅಲೆ ಇರೋ ಕಾರಣ ಪೊಲೀಸ್ ಸಿಬ್ಬಂದಿ ಬಿಗಿಭದ್ರತೆ ಹಾಗೂ ವಿವಿಧ ಕಾರ್ಯಗಳಿಗೆ ನಿಯೋಜನೆ ಮಾಡಿದ್ದೇವೆ. ಕೂಡಲೇ ಒಂದು ವಿಶೇಷ ತಂಡ ರಚನೆ ಮಾಡಿ ಉಳಿದ ಪ್ರಕರಣಗಳನ್ನ ಪತ್ತೆ ಹಚ್ಚುವ ಕೆಲಸ ಮಾಡುತ್ತೇವೆ ಎಂದು ಹಾವೇರಿ ಎಸ್ಪಿ ಕೆ.ಜಿ.ದೇವರಾಜ್ ಹೇಳಿದ್ದಾರೆ.