ಬೆಂಗಳೂರು: ಕೆಲವರಿಗೆ ಈ ಲಾಕ್‍ಡೌನ್ ಬಂಡವಾಳವಾಗಿದೆ. ಪೊಲೀಸರ ಸೋಗಿನಲ್ಲಿ ವಾಹನ ತಪಾಸಣೆ ನಡೆಸಿದ ನಕಲಿಗಳು, ಬೈಕ್ ಪಡೆದು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Advertisement
ಬಾರ್ ಬೈಂಡಿಂಗ್ ಕೆಲಸ ನಿಮಿತ್ತ ಮೇ 25 ರಂದು ನೈಸ್ ರಸ್ತೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ತಪನ್ ಬಿಸ್ವಾಸ್ ಅನ್ನೋರನ್ನ ತಡೆ ಹಾಕಿದ್ದ ನಕಲಿ ಪೊಲೀಸ್ರು ಬೈಕ್ ಅಡ್ಡಗಟ್ಟಿ ನಾವು ಪೊಲೀಸರು ಲಾಕ್‍ಡೌನ್ ನಲ್ಲಿ ಯಾಕೆ ಸುಮ್ಮನೆ ಓಡಾಡ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಬೈಕ್ ಸವಾರನ ಆಧಾರ್ ಕಾರ್ಡ್, ಗಾಡಿ ಡಾಕ್ಯುಮೆಂಟ್ ಪಡೆದು ದುಷ್ಕರ್ಮಿಗಳು ಬೈಕ್ ಜಪ್ತಿ ಮಾಡುವ ನಾಟಕವನ್ನಾಡಿದ್ದಾರೆ.
Advertisement
Advertisement
ನಾಳೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಬಂದು ಬೈಕ್ ಪಡೆಯುವಂತೆ ಹೇಳಿ ಗಾಡಿ ಎತ್ಕೊಂಡು ಎಸ್ಕೇಪ್ ಆಗಿದ್ದಾರೆ. ಮರುದಿನ ಪೊಲೀಸ್ ಠಾಣೆಯಲ್ಲಿ ಬೈಕ್ ಕೇಳಿದ ತಪನ್ ಬಿಸ್ವಾಸ್‍ಗೆ ಶಾಕ್ ಕಾದಿತ್ತು. ಬೈಕ್ ನೋಂದಣಿ ಪರಿಶೀಲನೆ ನಡೆಸಿ ಬೈಕ್ ಇಲ್ಲಿ ಇಲ್ಲ ಎಂದು ಪೊಲೀಸರು ತಿಳಿಸಿದರು. ಬಳಿಕ ಮೂರ್ನಾಲ್ಕು ಪೊಲೀಸ್ ಠಾಣೆ ಸುತ್ತಾಡಿದರು ಎಲ್ಲೂ ಬೈಕ್ ಸಿಗಲಿಲ್ಲ. ಇದನ್ನೂ ಓದಿ: ಲಾಕ್‍ಡೌನ್ ಬಗ್ಗೆ ಜೂನ್ 5ರಂದು ಸಿಎಂ ತೀರ್ಮಾನ ಮಾಡ್ತಾರೆ: ಬೊಮ್ಮಾಯಿ
Advertisement
ಕೊನೆಗೆ ಇದು ಡಕಾಯಿತರ ಕೃತ್ಯ ಎಂದು ಅರಿತುಕೊಂಡ ತಪನ್ ಬಿಸ್ವಾಸ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಪಡೆದು ತನಿಖೆ ನಡೆಸಿದ ಪೊಲೀಸರಿಂದ ತಪನ್ ಬಿಸ್ವಾಸ್ ಸ್ನೇಹಿತ ತಪನ್ ರಾಯ್, ಶರತ್ ಶೆಟ್ಟಿ, ಪೂರ್ವಿಕ್ ರಾಜ್ ಮತ್ತು ಮೋಹನ್ ಕುಮಾರ್‍ನ ಬಂಧನ ಮಾಡಲಾಗಿದೆ. ದೂರುದಾರ ತಪನ್ ಬಿಸ್ವಾಸ್ ಬಳಿ ಹಣ ಇದೆ ಎಂದು ಸ್ನೇಹಿತ ತಪನ್ ರಾಯ್ ಕೊಟ್ಟ ಪ್ಲಾನ್ ನಂತೆ ಬೈಕ್ ಕದಿಯುವ ಕೆಲಸ ಮಾಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ನಕಲಿ ಕಳ್ಳ ಪೊಲೀಸ್ ಆಟ ಬಾಯ್ಬಿಟ್ಟ ಆರೋಪಿಗಳಿಗೆ ಸರಿಯಾಗೆ ಬುದ್ದಿ ಕಲಿಸಿದ್ದಾರೆ.