– ಮಗಳಿಗಾಗಿ ಹಂಬಲಿಸಿದ್ದ ತಾಯಿ ಕರುಳು
– ಪೊಲೀಸರ ಬಳಿ ಮನವಿ ಮಾಡಿ ಮಗು ಪಡೆದ ತಾಯಿ
ನೆಲಮಂಗಲ: ಕೊರೊನಾ ಇಡೀ ಪ್ರಪಂಚವನ್ನೇ ಹಿಂಡಿ ಹಿಪ್ಪೆ ಮಾಡಿದೆ. ಹಾಗೋ ಹೀಗೋ ದುಡಿದು ತಿನ್ನುತ್ತಿದ್ದವರ ಸ್ಥಿತಿಯಂತೂ ಹೇಳತೀರದಾಗಿದೆ. ಅದೇ ರೀತಿ ಇಲ್ಲೊಬ್ಬ ತಾಯಿ ಕೆಲಸವಿಲ್ಲದ್ದಕ್ಕೆ ಮಗುವನ್ನು ಸಾಕಲಾಗದೆ ಬೇರೆಯವರಿಗೆ ದತ್ತು ನೀಡಿದ್ದಳು. ಆದರೆ ತಾಯಿ ಕರುಳು ಮಾತ್ರ ಮಗುವಿಗಾಗಿ ಹಂಬಲಿಸುತ್ತಿತ್ತು. ಹೀಗಾಗಿ ತಡೆಯಲಾಗದೆ ತಾಯಿ ತನ್ನ ಮಗುವನ್ನು ಪಡೆದಿದ್ದಾಳೆ.
ಬೆಂಗಳೂರು ಹೊರವಲಯದ ನೆಲಮಂಗಲ ನಗರದ ಬಸವನಹಳ್ಳಿ ನಿವಾಸಿ ನಾಗಲಕ್ಷ್ಮಿ ಅವರ ಮೂರುವರೆ ವರ್ಷದ ಹೆಣ್ಣು ಮಗು ಮತ್ತೆ ಮಡಿಲು ಸೇರಿದೆ. ದತ್ತು ನೀಡಿದ್ದರೂ ಹೆತ್ತಕರುಳು ಮತ್ತೆ ಮಗುವಿಗಾಗಿ ಹಂಬಲಿಸಿತ್ತು. ಹೀಗಾಗಿ ತಾಯಿ ಪೊಲೀಸರ ಮೊರೆಹೋಗಿದ್ದರು. ನೆಲಮಂಗಲ ಟೌನ್ ಪೊಲೀಸರಿಂದ ಮಗು ತಾಯಿಯ ಮಡಿಲಿಗೆ ಸೇರಿ ಸುಖಾಂತ್ಯವಾಗಿದೆ.
ಲಾಕ್‍ಡೌನ್ ವೇಳೆ ಕೆಲಸವಿಲ್ಲದೆ, ಮಗುವನ್ನು ಸಾಕಲು ಸಾಧ್ಯವಾಗದೆ ತುಮಕೂರು ಜಿಲ್ಲೆಯ ಶಿರಾ ಮೂಲದ ವ್ಯಕ್ತಿಗೆ ಮಹಿಳೆ ಮಗುವನ್ನು ದತ್ತು ನೀಡಿದ್ದರು. ಆದರೆ ಮಗುವನ್ನು ಬಿಟ್ಟು ಇರಲಾಗದೆ ಮಹಿಳೆ ಮಗುವನ್ನು ಮರಳಿ ಕೊಡಿಸುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಳು. ಅದರಂತೆ ಇದೀಗ ಮೂರುವರೆ ವರ್ಷದ ಹೆಣ್ಣು ಮಗು ತಾಯಿಯ ಮಡಿಲು ಸೇರಿದೆ.
ತಾಯಿ ಮಗುವನ್ನು ನೋಡಲು ಹಂಬಲಿಸುತ್ತಿದ್ದಳು, ಹೀಗಾಗಿ ತಡೆಯಲಾಗದೆ ಪೊಲೀಸರ ಮೊರೆ ಹೋಗಿ ಮಗು ಪಡೆದಿದ್ದಾರೆ. ನೆಲಮಂಗಲ ಪೊಲೀಸರ ಸಮ್ಮುಖದಲ್ಲಿ ಮಗು ಹಸ್ತಾಂತರವಾಗಿದೆ. ತುಂಬಾ ದಿನದ ನಂತರ ಮಗುವನ್ನ ನೋಡಿದ ತಾಯಿ ಕಣ್ಣೀರಿನಿಂದ ಮಗುವನ್ನು ಬಿಗಿದಪ್ಪಿ ಪಡೆದಿದ್ದಾರೆ.