ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಔಷಧ ಮಳಿಗೆಯೊಂದರಲ್ಲಿ ಕಳ್ಳತನ ನಡೆದಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಇಷ್ಟಲ್ಲದೇ ಇನ್ನೂ ಮೂರು ಮಳಿಗೆಗಳಲ್ಲಿ ಖದೀಮರು ಕಳ್ಳತನ ಮಾಡಲು ಯತ್ನಿಸಿರುವುದು ಪತ್ತೆಯಾಗಿದೆ. ಇದನ್ನು ಓದಿ: 3 ರಿಂದ 17 ವರ್ಷದವರಿಗೆ ಲಸಿಕೆ ಆರಂಭಿಸಿದ ಚೀನಾ
ಆರ್.ಕೃಷ್ಣ ಎಂಬವರ ಮಳಿಗೆಯ ಬಾಗಿಲು ಮುರಿದ ಕಳ್ಳರು 20 ಸಾವಿರ ನಗದು ಮತ್ತು ಲ್ಯಾಪ್‍ಟಾಪ್ ಹೊತ್ತೊಯ್ದಿದ್ದು, ಭಾನುವಾರ ಸಂಜೆ ದೂರು ದಾಖಲಾಗಿದೆ. ಸಿ.ಪಿ.ಬಝಾರದಲ್ಲಿರುವ ಸ್ಟೇಶನರಿ ಅಂಗಡಿ, ಉಣ್ಣೆಮಠ ಗಲ್ಲಿಯಲ್ಲಿರುವ ಬಟ್ಟೆ ಅಂಗಡಿಯ ಬಾಗಿಲನ್ನು ಕೂಡ ಮುರಿಯಲಾಗಿದ್ದು, ಇಲ್ಲೇ ಸಮೀಪದಲ್ಲಿರುವ ಪಾತ್ರೆ ಅಂಗಡಿಯೊಂದರ ಚಾವಣಿ ಮೂಲಕ ಒಳನುಗ್ಗಿದ್ದ ಕಳ್ಳರು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಆದರೆ ಇಲ್ಲಿ ಯಾವುದೇ ಕಳುವಾಗಿಲ್ಲ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಘಟನೆ ಸ್ಥಳದಲ್ಲಿ ಶ್ವಾನದಳದವರು ಪರಿಶೀಲನೆ ನಡೆಸಿದ್ದಾರೆ. ತನಿಖೆಗಾಗಿ ಪ್ರತ್ಯೇಕ ತಂಡ ರಚಿಸಲಾಗಿದ್ದು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಓದಿ: ತೇಜಸ್ವಿ ಸೂರ್ಯ ಆಪ್ತ ಸಹಾಯಕನ ಹೆಸರಿನಲ್ಲಿ ವಂಚನೆ- ಎಫ್‍ಐಆರ್ ದಾಖಲು