ಮಂಗಳೂರು: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಕ್ಷಿಣ ಭಾರತದ ಪವಿತ್ರ ಪುಣ್ಯ ಕ್ಷೇತ್ರ. ಸರ್ಪ ಸಂಸ್ಕಾರ, ಆಶ್ಲೇಷ ಬಳಿ ಮುಂತಾದ ನಾಗ ದೇವರಿಗೆ ಸಂಬಂಧಿಸಿದ ವಿಶೇಷ ಪೂಜೆಗಳಿಗೆ ರಾಜ್ಯ ಮಾತ್ರವಲ್ಲದೇ ಇಡೀ ದೇಶದಿಂದ ಭಕ್ತರು ಆಗಮಿಸುತ್ತಾರೆ. ಅಷ್ಟೇ ಅಲ್ಲದೇ ಕರ್ನಾಟಕದಲ್ಲಿ ಹೆಚ್ಚು ಆದಾಯ ಕೊಡುವ ನಂಬರ್ 01 ದೇವಸ್ಥಾನ ಎಂಬ ಹೆಗ್ಗಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪಡೆದಿದೆ.
Advertisement
ದಿನನಿತ್ಯ ಹತ್ತು ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ಕುಕ್ಕೆಗೆ ವಿಶೇಷ ದಿನಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುವ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ ಈ ಬಾರಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರು ಪ್ರವೇಶವನ್ನು ನಿಷೇಧ ಮಾಡಲಾಗಿದ್ದು, ಇದು ದೇವಾಲಯದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.
Advertisement
ಕಳೆದ 2019ರ ಮಾರ್ಚ್‍ನಲ್ಲಿ 7,60,18,137.93 ರೂ, ಏಪ್ರಿಲ್ ನಲ್ಲಿ 6,57,33,223,.26 ರೂ ಹಾಗೂ ಮೇ ತಿಂಗಳಲ್ಲಿ 8,61,86,203.00 ರೂ ದೇವಸ್ಥಾನದ ಆದಾಯ ಆಗಿತ್ತು. ಒಟ್ಟಾಗಿ ಈ ಮೂರು ತಿಂಗಳ ಆದಾಯ 22,79,37,564.19 ರೂ ಆದಾಯ ಗಳಿಕೆಯಾಗಿತ್ತು. ಆದರೆ ಈ ಬಾರಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಯಾವುದೇ ಆದಾಯ ಗಳಿಕೆಯಾಗಿಲ್ಲ. ಪರಿಣಾಮ ದೇಗುಲದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.