ಬೆಂಗಳೂರು: ಒಂದು ವಾರದ ಲಾಕ್‍ಡೌನ್ ಅಂತ್ಯವಾಗಿದ್ದೆ ತಡ ಬೆಂಗಳೂರಿನಲ್ಲಿ ವಾಸವಿದ್ದ ಬೇರೆ ಬೇರೆ ರಾಜ್ಯದವರು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಕಡೆ ಮುಖ ಮಾಡಿದ್ದಾರೆ.
ಒಂದು ವಾರಗಳ ಕಾಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಮಾತ್ರ ಲಾಕ್‍ಡೌನ್ ಮಾಡಲಾಗಿತ್ತು. ರೈಲು ಮತ್ತು ವಿಮಾನ ಓಡಾಟವನ್ನು ನಿಲ್ಲಿಸಿರಲಿಲ್ಲ. ಆದರೆ ರೈಲ್ವೆ ನಿಲ್ದಾಣಕ್ಕೆ ಹೋಗಲು ಯಾವುದೇ ಬಸ್, ಆಟೋ, ಕ್ಯಾಬ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಬೇರೆ ಬೇರೆ ರಾಜ್ಯದ ಕಾರ್ಮಿಕರು ಒಂದು ವಾರ ಬೆಂಗಳೂರಿನಲ್ಲಿ ಲಾಕ್‍ಡೌನ್ ಆಗಿದ್ದರು. ಇದೀಗ ಲಾಕ್‍ಡೌನ್ ಅಂತ್ಯವಾಗುತ್ತಿದ್ದಂತೆ ಕಾರ್ಮಿಕರು ರೈಲ್ವೆ ನಿಲ್ದಾಣದ ಕಡೆ ಬರುತ್ತಿದ್ದಾರೆ.
Advertisement
Advertisement
ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಮುಂದೆ ಜನ ಕ್ಯೂ ನಿಂತಿದ್ದು, ಸಾವಿರಾರು ಜನ ಲಗೇಜ್ ಸಮೇತ ಬೆಂಗಳೂರನ್ನ ತೊರೆಯುತ್ತಿದ್ದಾರೆ. ಬೆಳ್ಳಂಬೆಳ್ಳಗ್ಗೆ ಹೊರ ರಾಜ್ಯದವರು ಬೆಂಗಳೂರನ್ನ ತೊರೆಯಲು ಮುಂದಾಗಿದ್ದು, ಬಿಹಾರ, ಪಾಟ್ನಾ ಮತ್ತು ಅಸ್ಸಾಂ ಕಡೆ ಹೋಗುವುದಕ್ಕೆ ಕಾರ್ಮಿಕರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಹಾಕಿಕೊಳ್ಳದೆ ಜನ ಲಗೇಜ್ ಇಟ್ಟಿಕೊಂಡು ಕಾಯುತ್ತಿದ್ದಾರೆ.
Advertisement
Advertisement
ಈ ಮೂಲಕ ಲಾಕ್‍ಡೌನ್ ಅಂತ್ಯ ಆಗಿದ್ದೆ ತಡ ಬೇರೆ ಬೇರೆ ರಾಜ್ಯಗಳಿಗೆ ಹೋಗಲು ಸಾವಿರಾರು ಜನ ಸಾಲು ಗಟ್ಟಿ ನಿಂತಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕನಿಗೂ ಟೆಂಪ್ರೇಚರ್ ಚೆಕ್ ಮಾಡಿ, ವೈದ್ಯಕೀಯ ತಪಾಸಣೆ ಮಾಡಿ ರೈಲು ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲದೇ ಹೊಂ ಕ್ವಾರಂಟೈನ್ ಸೀಲ್ ಚೆಕ್ ಮಾಡಿ ಒಳಗಡೆ ಬಿಡಲಾಗುತ್ತಿದೆ.