ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಕಳೆದ ಬುಧವಾರ ‘#DhoniRetires’ ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿತ್ತು. ಮರುದಿನ ಧೋನಿ ಪತ್ನಿ ಇದಕ್ಕೆ ಕೌಂಟರ್ ನೀಡುವ ಹಿನ್ನೆಲೆಯಲ್ಲಿ ‘#DhoniNeverRetire’ ಎಂದು ಟ್ಯಾಗ್ ಮಾಡಿ ಟ್ರೆಂಡ್ ಮಾಡಿದ್ದರು. ಆದರೆ ಧೋನಿ ನಿವೃತ್ತಿ ಕುರಿತು ಹಲವು ಆಟಗಾರು ತಮ್ಮ ಪ್ರತಿಕ್ರಿಯೆ ನೀಡಿದ್ದು, ವಿದಾಯದ ಪಂದ್ಯವನ್ನಾದರೂ ಆಡಲು ಅನುಮತಿ ನೀಡಬೇಕು ಎಂದು ಹೇಳಿದ್ದರು. ಆದರೆ ಇಂತಹ ಯಾವುದೇ ಸುದ್ದಿಗಳಿಗೆ ಇದುವರೆಗೂ ಧೋನಿ ಪ್ರತಿಕ್ರಿಯೆ ನೀಡಿಲ್ಲ.
Lioness @SaakshiSRawat on #Thala‘s low-profile social media presence and their plan post lockdown! #AnbuDenLioness @RuphaRamani ???????? pic.twitter.com/3gCejkxAYA
— Chennai Super Kings (@ChennaiIPL) May 31, 2020
Advertisement
ಲಾಕ್‍ಡೌನ್ ಮುಕ್ತಾಯದ ಬಳಿಕ ಧೋನಿ ಪ್ಲಾನ್ ಏನು ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಈ ಕುರಿತು ಸಾಕ್ಷಿ ಧೋನಿ ಪ್ರತಿಕ್ರಿಯೆ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಇನ್‍ಸ್ಟಾ ಲೈವ್‍ನಲ್ಲಿ ಈ ಕುರಿತು ಮಾತನಾಡಿದ್ದಾರೆ. ಲಾಕ್‍ಡೌನ್ ಬಳಿಕ ಕ್ರಿಕೆಟ್ ಪಂದ್ಯಗಳಿದ್ದರೆ ಧೋನಿ ಆಡುತ್ತಾರೆ. ಒಂದೊಮ್ಮೆ ಮ್ಯಾಚ್ ಇಲ್ಲದಿದ್ದರೆ ನಾನು, ಧೋನಿ ಇಬ್ಬರೂ ಹಿಮ ಬೆಟ್ಟಗಳಲ್ಲಿ ವಿಹಾರ ನಡೆಸಬೇಕೆಂಬ ಯೋಜನೆ ಮಾಡಿದ್ದಾಗಿ ತಿಳಿಸಿದ್ದಾರೆ.
Advertisement
ಉತ್ತರಖಂಡದ ಸಣ್ಣ ಹಳ್ಳಿಯೊಂದಕ್ಕೆ ಭೇಟಿ ನೀಡಲು ಪ್ಲಾನ್ ಮಾಡಿದ್ದೇವೆ. ಆ ಪ್ರದೇಶದಲ್ಲಿ ಹಿಮ ಹೆಚ್ಚಾಗಿರುತ್ತದೆ. ಧೋನಿಗೆ ಹಿಮ ಎಂದರೇ ಬಹಳ ಇಷ್ಟ. ಆದ್ದರಿಂದ ಕೆಲ ದಿನಗಳ ಸಮಯವನ್ನು ಅಲ್ಲಿಯೇ ಕಳೆಯುತ್ತೇವೆ. ಧೋನಿ ಡ್ರೈವಿಂಗ್ ಎಂದರೂ ಬಹಳ ಇಷ್ಟ. ರಸ್ತೆ ಮಾರ್ಗದಲ್ಲೇ ಪ್ರವಾಸ ಕೈಗೊಳ್ಳುತ್ತೇವೆ. ಇಂದಿಗೂ ಧೋನಿ ರಾಂಚಿ ಕ್ರೀಡಾಂಗಣಕ್ಕೆ ತರಬೇತಿಗೆ ತೆರಳುವ ವೇಳೆ ಸೆಲ್ಫ್ ಡ್ರೈವಿಂಗ್ ಮಾಡಿಕೊಂಡು ಹೋಗುತ್ತಾರೆ ಎಂದು ಸಾಕ್ಷಿ ತಿಳಿಸಿದ್ದಾರೆ.
Advertisement
Advertisement
ಇದೇ ವೇಳೆ ಧೋನಿ ನಿವೃತ್ತಿ ಬಗ್ಗೆ ಮಾತನಾಡಿದ ಸಾಕ್ಷಿ, ಅಂದು ನನಗೆ ಸ್ನೇಹಿತೆಯೊಬ್ಬರು ಫೋನ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿರುವ ಬಗ್ಗೆ ಕೇಳಿದ್ದರು. ಅಂದು ಮಧ್ಯಾಹ್ನದಿಂದಲೇ #DhoniRetires ಟ್ರೆಂಡ್ ಆಗುತ್ತಿತ್ತು. ಪರಿಣಾಮ ನನಗೆ ಏನಾಗುತ್ತೆ ಎಂಬುದು ಅರ್ಥವಾಗಲಿಲ್ಲ. ಆ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದೆ. ಯಾರು ಏನು ಹೇಳಿದರೂ ನಾನು ಮಾಡಬೇಕು ಎಂದುಕೊಂಡಿದ್ದನ್ನು ಮಾಡಿದ್ದೇನೆ. ಅಷ್ಟಕ್ಕೆ ನನ್ನ ಕೆಲಸ ಮುಕ್ತಾಯವಾಗಿತ್ತು ಎಂದು ವಿವರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಧೋನಿಗೆ ಹೇರ್ ಸ್ಟೈಲ್ ಕುರಿತು ಮಾತನಾಡಿರುವ ಸಾಕ್ಷಿ, ಅದೃಷ್ಟ ಎಂಬಂತೆ ಧೋನಿ ಲಾಂಗ್ ಹೇರ್ ಸ್ಟೈಲ್ ವೇಳೆ ಅವರನ್ನು ನಾನು ನೋಡಿರಲಿಲ್ಲ. ಆರೆಂಜ್ ಬಣ್ಣದ ಹೇರ್ ಸ್ಟೈಲ್ ನೋಡಿದ್ದರೆ ಮತ್ತೆ ಅವರನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ದೈಹಿಕ ಸೌಂದರ್ಯದ ಬಗ್ಗೆ ಎಲ್ಲರಿಗೂ ಅವರದ್ದೇ ಅಭಿಪ್ರಾಯವಿರುತ್ತದೆ ಎಂದು ಸಾಕ್ಷಿ ಹೇಳಿದ್ದಾರೆ.