ಚಿತ್ರದುರ್ಗ: ಕೊರೊನಾ ಎರಡನೇ ಹಿನ್ನೆಲೆ ಜಿಲ್ಲೆಯಾದ್ಯಂತ 12 ದಿನ ಕಠಿಣ ಲಾಕ್‍ಡೌನ್ ಜಾರಿಗೊಳಿಸಿದರೂ ಜನ ಮಾತ್ರ ಡೋಂಟ್‍ಕೇರ್ ಎನ್ನುತಿದ್ದಾರೆ. ಅನಗತ್ಯವಾಗಿ ಓಡಾಡುತ್ತ ಹಳ್ಳಿಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿಸುತಿದ್ದಾರೆ. ಹೀಗಾಗಿ ಎಚ್ಚೆತ್ತಿರುವ ಚಿತ್ರದುರ್ಗ ಪೊಲೀಸ್ ಎಸ್‍ಪಿ ರಾಧಿಕಾ ಡ್ರೋಣ್ ಕ್ಯಾಮೆರಾ ಮೂಲಕ ಲಾಕ್‍ಡೌನ್ ಉಲ್ಲಂಘನೆಯ ದೃಶ್ಯಗಳನ್ನು ಸೆರೆ ಹಿಡಿಯುವ ಕಾರ್ಯಕ್ಕೆ ಇಂದು ಚಾಲನೆ ನೀಡಿದ್ದಾರೆ.
- Advertisement 2-
ಲಾಕ್‍ಡೌನ್ ವೇಳೆ ಅನಾವಶ್ಯಕವಾಗಿ ರಸ್ತೆಗಿಳಿದು, ಕೊರೊನಾ ಹರಡಲು ಕಾರಣರಾಗುವವರ ಚಲನವಲನವನ್ನು ಡ್ರೋಣ್ ಕ್ಯಾಮೆರಾ ಮೂಲಕ ಸೆರೆ ಹಿಡಿದು, ದಂಡ ವಿಧಿಸಿ, ಕೇಸ್ ಧಾಖಲಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಈ ಡ್ರೋಣ್ ಕ್ಯಾಮೆರಾ ಸುಮಾರು 5 ಕಿ.ಮೀ. ವರೆಗೆ ನಡೆಯುವ ಎಲ್ಲ ಚಲನವಲನಗಳನ್ನು ಸೆರೆ ಹಿಡಿಯಲಿದ್ದು, ಉತ್ತಮ ಗುಣಮಟ್ಟದ ದೃಶ್ಯಗಳನ್ನು ಸೆರೆ ಹಿಡಿಯಲಿದೆ. ಇದರಿಂದಾಗಿ ಲಾಕ್‍ಡೌನ್ ಉಲ್ಲಂಘನೆಗೆ ಬ್ರೇಕ್ ಹಾಕಲು ಇದೊಂದು ಉತ್ತಮ ತಂತ್ರಜ್ಞಾನವಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ, ಲಾಕ್‍ಡೌನ್ ಅವಶ್ಯವಿಲ್ಲ: ಸೋಮಣ್ಣ
- Advertisement 3-
- Advertisement 4-
ಅನವಶ್ಯಕವಾಗಿ ಓಡಾಡುವವರು, ಜೂಜುಕೋರರು ಹಾಗೂ ಲಾಕ್‍ಡೌನ್ ಉಲ್ಲಂಘಿಸುವವರಿಗೆ ಬ್ರೇಕ್ ಹಾಕಲು ಈ ಡ್ರೋಣ್ ಮೂಲಕ ವೀಡಿಯೋ ರೆಕಾರ್ಡ್ ಮಾಡಿ ಮತ್ತೊಮ್ಮೆ ತಪ್ಪಿ ಮಾಡದಂತೆ ಮೊದಲು ಎಚ್ಚರಿಕೆ ನೀಡಲಾಗುವುದು. ಒಮ್ಮೆ ಎಚ್ಚರಿಸಿದ ಬಳಿಕವೂ ಮತ್ತೆ ಕಾನೂನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.