ಬೆಂಗಳೂರು: ಲಾಕ್‍ಡೌನ್ ಘೋಷಣೆಯಾಗುತ್ತಿದ್ದಂತೆ ನಗರದ ಮೆಜೆಸ್ಟಿಕ್‍ನಲ್ಲಿ ಜನ ನೆರೆದಿದ್ದು, ತಮ್ಮ ಊರುಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಬಸ್ ನಿಲ್ದಾಣ ಸಂಪೂರ್ಣವಾಗಿ ಜನರಿಂದ ತುಂಬಿ ತುಳುಕುತ್ತಿದ್ದು, ಲಾಕ್‍ಡೌನ್ ಆಗುವಷ್ಟರಲ್ಲಿ ಮನೆ ಸೇರಿಕೊಳ್ಳಬೇಕೆಂದು ಜನ ಹೊರಟಿದ್ದಾರೆ.
Advertisement
ನಾಳೆ ರಾತ್ರಿಯಿಂದ 14 ದಿನಗಳ ಕಾಲ ಜನತಾ ಕಪ್ರ್ಯೂನ್ನು ಘೋಷಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಜನ ತಮ್ಮ ಊರುಗಳಿಗೆ ತೆರಳಲು ಲಗೇಜ್ ಸಮೇತ ಮೆಜೆಸ್ಟಿಕ್ ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಜನ ಜಾತ್ರೆಯೇ ನೆರೆದಿದ್ದು, ತಮ್ಮ ಊರುಗಳ ಬಸ್‍ಗಳನ್ನು ಹುಡುಕುತ್ತಿದ್ದಾರೆ. ಬಸ್ ಬಂದ ತಕ್ಷಣ ಓಡೋಡಿ ಹೋಗಿ ಹತ್ತುತ್ತಿದದ್ದಾರೆ.
Advertisement
Advertisement
ಲಾಕ್‍ಡೌನ್ ಆಗುವಷ್ಟರಲ್ಲಿ ಊರು ಸೇರಬೇಕು, ಲಾಕ್‍ಡೌನ್ ಆದರೆ ಮಧ್ಯದಲ್ಲೇ ಸಿಕ್ಕಿ ಹಾಕಿಕೊಳ್ಳುತ್ತೇವೆ. ಅಲ್ಲದೆ ಕೊರೊನಾ ಸಹ ಹೆಚ್ಚಾಗುತ್ತಿದೆ, ಹೀಗಾಗಿ ನಮ್ಮ ಊರುಗಳನ್ನು ಸೇರಬೇಕು ಎಂದು ಜನ ಓಡುತ್ತಿದ್ದಾರೆ. ಹೀಗೆ ತಮ್ಮ ಊರಗಳ ಬಸ್‍ಗಳನ್ನು ಹತ್ತಿ ತೆರಳುತ್ತಿದ್ದಾರೆ.
Advertisement
ಮೆಜೆಸ್ಟಿಕ್ ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತಂಡೋಪ ತಂಡವಾಗಿ ಜನ ಬರುತ್ತಿದ್ದು, ಇಂದು ಹಾಗೂ ನಾಳೆ ರಾತ್ರಿವರೆಗೆ ಮಾತ್ರ ಅವಕಾಶವಿದೆ. ಹೀಗಾಗಿ ಹೆದರಿಕೊಂಡು ಜನ ಬಸ್ ನಿಲ್ದಾಣದತ್ತ ಧಾವಿಸುತ್ತಿದ್ದಾರೆ. ಈ ಗದ್ದಲದ ನಡುವೆ ಸರ್ಕಾರದ ಶೇ.50ರಷ್ಟು ಸೀಟ್ ಭರ್ತಿ ನಿಯಮ ಪಾಲನೆಯಾಗುತ್ತಿಲ್ಲ. ಬಸ್ ಗಳಲ್ಲಿ ಸೀಟ್‍ಗಳಿಗಾಗಿ ಗಲಾಟೆ ಹೆಚ್ಚುತ್ತಿದೆ. ಹೀಗಾಗಿ ಸ್ಟಾಂಡಿಂಗ್ ಗೆ ಸಹ ಅವಕಾಶ ಕಲ್ಪಿಸಲಾಗುತ್ತಿದೆ.