ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ಗೆ ರಾಜ್ಯ ಸರ್ಕಾರವೇನೋ ಜನತಾ ಲಾಕ್ಡೌನ್ ಮಾಡಿದೆ. ಆದರೆ ಈ ಜನತಾ ಲಾಕ್ಡೌನ್ ಎಷ್ಟರ ಮಟ್ಟಿಗೆ ಸಕ್ಸಸ್ ಆಗಿದೆ ಎಂಬುದರ ಬಗ್ಗೆ ಐಐಎಸ್ಸಿ ವರದಿ ನೀಡಿದೆ.
ವರದಿ ಪ್ರಕಾರ ರಾಜ್ಯದ 23 ಜಿಲ್ಲೆಗಳಲ್ಲಿ ಲಾಕ್ಡೌನ್ ವರ್ಕೌಟ್ ಆಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಶೇ.50ರಷ್ಟು ಮಾತ್ರ ಲಾಕ್ಡೌನ್ ಯಶಸ್ವಿಯಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಐಐಎಸ್ಸಿ ಪ್ರಕಾರ, ಬೆಂಗಳೂರಿನಲ್ಲಿ ಲಾಕ್ಡೌನ್ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ.
ಎಲ್ಲೆಲ್ಲಿ ಸಕ್ಸಸ್?
ಬೆಂಗಳೂರು, ಬೀದರ್, ಚಿತ್ರದುರ್ಗ
ಎಲ್ಲೆಲ್ಲಿ 50:50?
ವಿಜಯಪುರ, ಉಡುಪಿ, ಕಲಬುರುಗಿ, ದಕ್ಷಿಣ ಕನ್ನಡ
ಎಲ್ಲೆಲ್ಲಿ ಫೇಲ್?
ಯಾದಗಿರಿ, ಉತ್ತರ ಕನ್ನಡ, ತುಮಕೂರು, ಶಿವಮೊಗ್ಗ, ಮೈಸೂರು, ರಾಯಚೂರು, ಮಂಡ್ಯ, ಕೊಪ್ಪಳ, ಕೋಲಾರ, ಕೊಡಗು, ದಾವಣಗೆರೆ, ಧಾರವಾಡ, ಗದಗ, ಹಾಸನ, ಚಿಕ್ಕಮಗಳೂರು, ಬೆಳಗಾವಿ, ಬಾಗಲಕೋಟೆ, ರಾಮನಗರ, ಹಾವೇರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ.