ಮಂಡ್ಯ: ಲಾಕ್‍ಡೌನ್ ಬಿಸಿ ಜನರಿಗೆ ಮಾತ್ರವಲ್ಲ ದೇವಸ್ಥಾನಗಳಿಗೂ ಸಹ ತಟ್ಟಿದೆ. ಇಂದಿನಿಂದ ರಾಜ್ಯ ಸರ್ಕಾರ ಜನರಿಗೆ ಅನುಕೂಲವಾಗಲೆಂದು ಲಾಕ್‍ಡೌನ್‍ನನ್ನು ಸಡಿಲಿಕೆಗೊಳಿಸುವ ಮೂಲಕ ಜನರಿಗೆ ಲಾಕ್‍ಡೌನ್‍ನಿಂದ ರಿಲೀಫ್ ನೀಡಲಾಗಿದೆ. ಆದರೆ ದೇಸ್ಥಾನಗಳಿಗೆ ಮಾತ್ರ ಲಾಕ್‍ಡೌನ್ ರಿಲೀಫ್ ನೀಡಲಾಗಿಲ್ಲ.
ಈ ಹಿನ್ನೆಲೆಯಲ್ಲಿ ಇಂದು ಮಂಡ್ಯದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಬೇಕಿದ್ದ ರಥೋತ್ಸವ ಸರಳವಾಗಿ ನೆರವೇರುತ್ತಿದೆ. ರಸ್ತೆಗಳಲ್ಲಿ ರಥೋತ್ಸವವನ್ನು ನಡೆಸದೆ ದೇವಸ್ಥಾನದ ಆವರಣದಲ್ಲಿ ರಥೋತ್ಸವ ನಡೆಸಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನ ಮಾಡಿದೆ. ಈಗಾಗಲೇ ರಥೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
Advertisement
Advertisement
ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ರಥೋತ್ಸವ ನಡೆಯುತ್ತಿತ್ತು. ಈ ವೇಳೆ ಸಾವಿರಾರು ಭಕ್ತರು ಸೇರಿ ಚಾಮುಂಡೇಶ್ವರಿ ತಾಯಿಯ ಕೃಪೆಗೆ ಪಾತ್ರರಾಗುತ್ತಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ಈ ಬಾರಿ ರಥೋತ್ಸವವನ್ನು ಸರಳವಾಗಿ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.
Advertisement
ಸದ್ಯಕ್ಕೆ ರಥಕ್ಕೆ ಶೃಂಗಾರ ಮಾಡಲಾಗುತ್ತಿದೆ. ನಂತರ ಅದರಲ್ಲಿ ತಾಯಿ ಚಾಮುಂಡಿದೇವಿಯ ವಿಗ್ರಹವನ್ನು ಕೂರಿಸಿ ಪೂಜೆ ಮಾಡಲಾಗುತ್ತದೆ. ಅಲ್ಲದೇ ರಸ್ತೆಗಳಲ್ಲಿ ರಥೋತ್ಸವ ನಡೆಸದೆ ಕೇವಲ ದೇವಸ್ಥಾನದ ಆವರಣದಲ್ಲಿ ಮಾತ್ರ ನಡೆಸಲಾಗುತ್ತದೆ. ಇದರಿಂದ ಭಕ್ತರು ನಿರಾಶೆಗೊಂಡಿದ್ದಾರೆ.
Advertisement