ಬೆಂಗಳೂರು: ಒಂದು ವಾರಗಳ ಕಾಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾರಿಯಾಗಿದ್ದ ಲಾಕ್‍ಡೌನ್ ಇಂದು ಕೊನೆ ಆಗುತ್ತೆ. ಈ ನಡುವೆ ಜನರ ಓಡಾಟ ಮತ್ತು ವಾಹನಗಳ ಸಂಚಾರ ಹೆಚ್ಚಾಗಿದೆ.
ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೊನಾವನ್ನು ನಿಯಂತ್ರಣ ಮಾಡಲು ಸರ್ಕಾರ ಒಂದು ವಾರ ಲಾಕ್‍ಡೌನ್ ಘೋಷಣೆ ಮಾಡಿತ್ತು. ಇಂದು ಒಂದು ವಾರದ ಲಾಕ್‍ಡೌನ್ ಮುಗಿಯಲಿದೆ. ಆದರೆ ಲಾಕ್‍ಡೌನ್ ಕೊನೆ ದಿನ ಬೆಂಗಳೂರಿನಲ್ಲಿ ವಾಹನಗಳ ಸಂಚಾರ, ಜನರ ಓಡಾಟ ಎಂದಿನಂತೆ ಇದೆ. ಬಳ್ಳಾರಿ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಲಾಕ್‍ಡೌನ್ ಇದ್ದರು ಯಾವುದೇ ಆತಂಕ ಇಲ್ಲದೆ ವಾಹನಗಳು ಸಂಚಾರ ಮಾಡುತ್ತಿವೆ.
Advertisement
Advertisement
ಬೈಕ್, ಕಾರ್, ಗೂಡ್ಸ್, ಆಟೋ ವಾಹನಗಳು ಸಂಚಾರ ಅಧಿಕವಾಗಿದೆ. ವಾಹನ ಸಂಚಾರ ನಿಯಂತ್ರಣಕ್ಕೆ ಪೊಲೀಸರು ರಸ್ತೆ ಕ್ಲೋಸ್ ಮಾಡಿದ್ದಾರೆ. ಆದರೆ ಜನರು ಕ್ಲೋಸ್ ಮಾಡಿರುವ ರಸ್ತೆಯನ್ನೆ ವಾಕಿಂಗ್ ಪಾರ್ಕ್ ಮಾಡಿಕೊಂಡಿದ್ದು, ಕೊರೊನಾ ಆತಂಕ ಇಲ್ಲದೆ ವಾಕಿಂಗ್ ಮಾಡುತ್ತಿದ್ದಾರೆ. ಅಲ್ಲದೇ ರಸ್ತೆ ಮಧ್ಯೆ ವ್ಯಾಯಾಮ ಮಾಡುತ್ತಿದ್ದಾರೆ. ಸರ್ಕಾರ ವಾಕಿಂಗ್‍ಗೂ ಹೊರಗೆ ಬರಬಾರದು ಅಂತ ಆದೇಶ ಮಾಡಿತ್ತು. ಆದರೆ ಸರ್ಕಾರದ ಆದೇಶ ಮೀರಿ ಜನರು ವಾಕಿಂಗ್ ಮಾಡುತ್ತಿದ್ದಾರೆ.
Advertisement
Advertisement
ಗೊರಗುಂಟೆಪಾಳ್ಯದಲ್ಲೂ ಎಂದಿನಂತೆ ಜನರು ಓಡಾಟ ಮಾಡುತ್ತಿದ್ದು, ಗೊರಗುಂಟೆಪಾಳ್ಯ ಸಿಗ್ನಲ್‍ನಲ್ಲಿ ಭಾರೀ ವಾಹನಗಳು ಓಡಾಡುತ್ತಿವೆ. ಕೆ.ಆರ್.ಮಾರ್ಕೆಟ್‍ನಲ್ಲಿ ಎಂದಿನಂತೆ ಜನ ಓಡಾಟ ಇದೆ. ಇನ್ನೂ ಯಲಹಂಕ ಮಾರ್ಕೆಟ್‍ನಲ್ಲೂ ತರಕಾರಿ, ಹಣ್ಣು-ಹಂಪಲು ಖರೀದಿಗೆ ಜನ ದಟ್ಟಣೆ ಹೆಚ್ಚಾಗಿದೆ.
ಬ್ಯಾಟರಾಯನಪುರ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಬೆಳ್ಳಂಬೆಳಗ್ಗೆ ಬ್ಯಾಟರಾಯನಪುರ ಮಾರ್ಕೆಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.